Tuesday, September 29, 2026

BDA Apartments

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಭೈರತಿ ಬಸವರಾಜ್ ನೇಮಕ BDA JK_Adv BDA Adv
Home Front Page  ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಭೈರತಿ ಬಸವರಾಜ್ ನೇಮಕ.

 ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಭೈರತಿ ಬಸವರಾಜ್ ನೇಮಕ.

ಬೆಂಗಳೂರು,ಜುಲೈ,16,2022(www.justkannada.in):  ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಭೈರತಿ ಬಸವರಾಜು ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ನಗರಾಭಿವೃದ್ಧಿ ಖಾತೆ  ಸಚಿವರಾಗಿರುವ ಬೈರತಿ ಬಸವರಾಜ ಅವರಿಗೆ ದಾವಣಗೆರೆ ಜತೆಗೆ ಹೆಚ್ಚುವರಿಯಾಗಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹೊಣೆ ನೀಡಲಾಗಿದೆ.  ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ತತ್ತರಿಸಿದ್ದು ಈ  ಸಂದರ್ಭದಲ್ಲಿ ಉಸ್ತುವಾರಿ ಸಚಿವರ ನೇಮಕವಾಗಿದೆ.Corona -Ramesh jarakiholi- Campaign- Doubt-Minister- Bhairati Basavaraj.

ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದ ಜಿಲ್ಲೆಗಳಿಗೆ ಬೇರೆ ಜಿಲ್ಲೆಗಳ ಸಚಿವರು ನೇಮಕವಾಗಿದ್ದು, ಕೆಲವು ಸಚಿವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಹೆಚ್ಚುವರಿ ಉಸ್ತುವಾರಿ ಹೊಣೆ‌ ಹೊತ್ತ ಬೆನ್ನಲ್ಲೇ ಬೈರತಿ ಬಸವರಾಜ ಅವರು ಚಿಕ್ಕಮಗಳೂರು ಜಿಲ್ಲೆಯ ಅತಿವೃಷ್ಟಿ ಬಾಧಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ, ಹಾನಿ ಪರಿಶೀಲಿಸಿದ್ದಾರೆ.

Key words: Bhairati Basavaraj -appointed – Chikmagalur- distric-t in-charge -minister