Friday, August 14, 2026

BDA Apartments

Home Cinema ಕ್ರೇಜ್ ಹೆಚ್ಚಳದೊಂದಿಗೆ ಪುಷ್ಪ-2 ಬಜೆಟ್ ಕೂಡ ಏರುತ್ತಿದೆ: ಬರೋಬ್ಬರಿ 350 ಕೋಟಿ

ಕ್ರೇಜ್ ಹೆಚ್ಚಳದೊಂದಿಗೆ ಪುಷ್ಪ-2 ಬಜೆಟ್ ಕೂಡ ಏರುತ್ತಿದೆ: ಬರೋಬ್ಬರಿ 350 ಕೋಟಿ

ಬೆಂಗಳೂರು, ಜುಲೈ 13, 2022 (www.justkannada.in): ಪುಷ್ಪ1 ಸಿನಿಮಾ ಸೂಪರ್ ಆದ ಬೆನ್ನಲ್ಲೇ ಪುಷ್ಪ 2 ಕುರಿತ ಕ್ರೇಜ್ ಶುರುವಾಗಿದೆ.

ಪುಷ್ಪ ಮೊದಲ ಭಾಗಕ್ಕೆ ಸಿಕ್ಕ ರೆಸ್ಪಾನ್ಸ್‌ನಿಂದಾಗಿ ನಿರ್ದೇಶಕ ಸುಕುಮಾರ್ ಭಾಗ ಎರಡನ್ನು ಬೇರೆ ಲೆವೆಲ್‌ನಲ್ಲಿ ಮಾಡಲು ಸಜ್ಜಾಗಿದ್ದಾರೆ.

ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವ ಕಾರಣಕ್ಕೆ, ಚಿತ್ರದ ಬಜೆಟ್ ಲೆಕ್ಕಾಚಾರ ಹೆಚ್ಚಾಗುತ್ತಿದೆ. ವಿಶೇಷ ಎಂದರೆ ಚಿತ್ರದ ಬಜೆಟ್ ಬರೋಬ್ಬರಿ 350 ಕೋಟಿಗೂ ಹೆಚ್ಚು ಎನ್ನಲಾಗುತ್ತಿದೆ.

ಪುಷ್ಪ ಮೊದಲ ಭಾಗದ ಚಿತ್ರೀಕರಣದ ವೇಳೆಯೇ, ‘ಪುಷ್ಪ 2’ಗೆ ಬೇಕಾದ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿತ್ತು. ಆದರೆ ಪುಷ್ಪ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ ಅದನ್ನು ಮತ್ತೆ ಬದಲಾಯಿಸಲು ಚಿತ್ರದ ನಿರ್ದೇಶಕ ಮುಂದಾಗಿದ್ದಾರೆ ಎನ್ನಲಾಗಿದೆ.

ಚಿತ್ರದ ತಾಂತ್ರಿಕ ಬಳಗ ಮತ್ತು ಕಲಾವಿದರ ಬಳವೂ ಹೆಚ್ಚಾದ ಕಾರಣ ಬಜೆಟ್ ಕೂಡ ದುಪ್ಪಟ್ಟು ಆಗಿದೆ. ಸದ್ಯ ಮಾಹಿತಿಯ ಪ್ರಕಾರ ಪುಷ್ಪ 2 ಚಿತ್ರಕ್ಕೆ ಒಟ್ಟು 350 ಕೋಟಿ ಎನ್ನಲಾಗುತ್ತಿದೆ.