ಪಠ್ಯ ಪರಿಷ್ಕರಣೆ ವಿಚಾರ: ಹೊಸ ಸಮಿತಿ ರಚನೆ ಇಲ್ಲ- ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ.

ಕೊಡಗು,ಜೂನ್,27,2022(www.justkannada.in): ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯ ಪರಿಷ್ಕರಣೆಗೆ ವಿರೋಧ ವ್ಯಕ್ತವಾಗಿದ್ದು ನೂತನ ಸಮಿತಿ ರಚನೆಗೆ ಆಗ್ರಹ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಹೊಸ ಸಮಿತಿ ರಚನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ.

ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಪಠ್ಯ ಪರಿಷ್ಕರಣೆ ಸಂಬಂಧ ಹೊಸ ಸಮಿತಿ ರಚನೆ ಮಾಡುವುದಿಲ್ಲ.  ಬಸವಣ್ಣನವರ ಒಂದು ಪಾಠ ಮಾತ್ರ ತಿದ್ದುಪಡಿ ಆಗಲಿದೆ. ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದರು.

ಈಗಾಗಲೇ ಶೇ 80 ರಷ್ಟು ಪಠ್ಯಪುಸ್ತಕ ವಿತರಣೆಯಾಗಿದೆ.  ಅಧಿಕಾರಿಗಳ ಸಲಹೆ ಪಡೆದು ಪರಿಷ್ಕರಣೆ ಮಾಡಿತ್ತೇವೆ ಎಂದು ಬಿ.ಸಿ ನಾಗೇಶ್ ತಿಳಿಸಿದರು.

Key words:  Text revision -no -new- committee –structure-Minister -BC Nagesh