Sunday, September 20, 2026

BDA Apartments

ಅಂತರಾಷ್ಟ್ರೀಯ ಯೋಗ ದಿನ ಯಶಸ್ವಿಗೆ ಶಾಸಕ ಎಸ್.ಎ ರಾಮದಾಸ್ ಸಂತಸ BDA JK_Adv BDA Adv
Home Front Page ಅಂತರಾಷ್ಟ್ರೀಯ ಯೋಗ ದಿನ ಯಶಸ್ವಿಗೆ ಶಾಸಕ ಎಸ್.ಎ ರಾಮದಾಸ್ ಸಂತಸ.

ಅಂತರಾಷ್ಟ್ರೀಯ ಯೋಗ ದಿನ ಯಶಸ್ವಿಗೆ ಶಾಸಕ ಎಸ್.ಎ ರಾಮದಾಸ್ ಸಂತಸ.

ಮೈಸೂರು,ಜೂನ್,21,2022(www.justkannada.in):  ಸಾಂಸ್ಕೃತಿಕನಗರಿ ಮೈಸೂರಿನ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಯೋಗ ಪ್ರದರ್ಶನ ಮಾಡಿದರು.

6.30ರ ಒಳಗೆ ಮೋದಿ ಮೈಸೂರು ಅರಮನೆಗೆ  ಆಗಮಿಸಿದ ಪ್ರಧಾನಿ ಮೋದಿ 6.30ರಿಂದ 7.45ರ ವರೆಗೂ ಯೋಗಭ್ಯಾಸ ನಡೆಸಿದರು. ಇನ್ನು ಅಂತರಾಷ್ಟ್ರೀಯ ಯೋಗ ದಿನ ಯಶಸ್ವಿಗೆ ಶಾಸಕ ಎಸ್.ಎ ರಾಮದಾಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಯೋಗ ಕಾರ್ಯಕ್ರಮ ಯಶಸ್ವಿಯಾಗಿದೆ. ಕಳೆದ ಒಂದು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದವು. ಶ್ರಮದ ಫಲವಾಗಿ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ಮೋದಿ ಆಗಮನದಿಂದಾಗಿ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿದೆ. ಸ್ವತಃ ಮೋದಿ ಮೈಸೂರಿನಲ್ಲಿ ಯೋಗ ಮಾಡಿರುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸೆಳೆದಿದೆ. ಇನ್ನು ಮುಂದಿನ ಒಂದು ವರ್ಷ ಮೈಸೂರು ಯೋಗ ಹಬ್ ಆಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಅಂತರಾಷ್ಟ್ರೀಯ ಯೋಗ ದಿನ ಯಶಸ್ವಿಗೆ ಶಾಸಕ ಎಸ್.ಎ ರಾಮದಾಸ್ ಸಂತಸ sa ramadas

ನಿನ್ನೆ ಸ್ವತಃ ಪ್ರಧಾನಿಯವರೇ ಕರೆದು ಕುಶಲೋಪರಿ ವಿಚಾರಿಸಿದ್ರು. ಆ ಕ್ಷಣವನ್ನು ನಾನು ಊಹಿಸಿರಲಿಲ್ಲ. ನಮ್ಮ ಕುಟುಂಬದ ಬಗ್ಗೆ ವಿಚಾರಿಸಿದರು. ಒಂದಷ್ಟು ಹಳೆಯ ನೆನಪುಗಳನ್ನ ಈ ವೇಳೆ ಮೆಲುಕು ಹಾಕಿದ್ರು. ಇದು ನನಗೆ ಅತ್ಯಂತ ಸಂತಸದ ಕ್ಷಣ ಎಂದು ಶಾಸಕ ಎಸ್.ಎ.ರಾಮದಾಸ್ ನುಡಿದರು.

Key words: MLA-SA Ramadas – happy – success – International Yoga Day