Sunday, September 20, 2026

BDA Apartments

ಸೂಪರ್ ಸ್ಟಾರ್ ರಜನಿಕಾಂತ್ 169ನೇ ಚಿತ್ರದ ಪೋಸ್ಟರ್ ರಿಲೀಸ್ BDA JK_Adv BDA Adv
Home Cinema ಸೂಪರ್ ಸ್ಟಾರ್ ರಜನಿಕಾಂತ್ 169ನೇ ಚಿತ್ರದ ಪೋಸ್ಟರ್ ರಿಲೀಸ್

ಸೂಪರ್ ಸ್ಟಾರ್ ರಜನಿಕಾಂತ್ 169ನೇ ಚಿತ್ರದ ಪೋಸ್ಟರ್ ರಿಲೀಸ್

ಬೆಂಗಳೂರು, ಜೂನ್ 18, 2022 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ಅವರ 169ನೇ ಸಿನಿಮಾಗೆ ʻಜೈಲರ್ʼ ಎಂದು ಹೆಸರಿಡಲಾಗಿದೆ.

ಬೀಸ್ಟ್ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಚಿತ್ರಕ್ಕೆ ಆ್ಯಕ್ಸನ್ ಕಟ್ ಹೇಳುತ್ತಿದ್ದಾರೆ. ಈ ವಿಷಯವನ್ನು ನೆಲ್ಸನ್‌ ದಿಲೀಪ್‌ಕುಮಾರ್‌ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಜೈಲರ್’ ಶೀರ್ಷಿಕೆ ಸೂಚಿಸುವಂತೆ ರಜನಿಕಾಂತ್ ಜೈಲು ವಾರ್ಡನ್ ಆಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ರಾತ್ರಿ ರಜನಿಕಾಂತ್ ಅವರ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ.

ಪೋಸ್ಟರ್‌ ನೋಡಿದ ಫ್ಯಾನ್ಸ್‌ಗಳಲ್ಲಿ ಕುತೂಹಲ ಹೆಚ್ಚಿಸಿದೆ. ವಿಶೇಷ ಪೋಸ್ಟರ್‌ನೊಂದಿಗೆ ಟೈಟಲ್​ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಸಿನಿಮಾವು ಆಕ್ಷನ್ ಡ್ರಾಮಾ ಎಂಬ ಸುಳಿವು ನೀಡಿದೆ.

ಚಿತ್ರದ ಹೆಚ್ಚಿನ ಭಾಗವನ್ನು ಚೆನ್ನೈನಲ್ಲಿ ಚಿತ್ರೀಕರಿಸಲಾಗುವುದು ಮತ್ತು ನಿರ್ದೇಶಕರು ಚಿತ್ರದ ಮೊದಲಾರ್ಧದ ಸ್ಕ್ರಿಪ್ಟ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.