Friday, August 21, 2026

BDA Apartments

Home Cinema ಈ ಶುಕ್ರವಾರ (ಜೂ.17) ಥಿಯೇಟರ್’ಗೆ ಬರಲಿದೆ ಕನ್ನಡದ ಮೊದಲ ವರ್ಚುವಲ್ ಸಿನಿಮಾ ಮೇಡ್ ಇನ್...

ಈ ಶುಕ್ರವಾರ (ಜೂ.17) ಥಿಯೇಟರ್’ಗೆ ಬರಲಿದೆ ಕನ್ನಡದ ಮೊದಲ ವರ್ಚುವಲ್ ಸಿನಿಮಾ ಮೇಡ್ ಇನ್ ಚೈನಾ !

ಬೆಂಗಳೂರು, ಜೂನ್ 16, 2022 (www.justkannada.in): ಕನ್ನಡದ ಮೊದಲ ವರ್ಚುವಲ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರುವ ಮೇಡ್ ಇನ್ ಚೈನಾ ಸಿನಿಮಾ ಜೂನ್‌ 17ರಂದು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಟಿಸಿದ್ದಾರೆ. ಮೇಡ್ ಇನ್ ಚೈನಾ ಸಿನಿಮಾ ಡೇಟ್ ರಿಲೀಸ್ ಆಗಿದ್ದು, ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ‘ಮೇಡ್​ ಇನ್​ ಚೈನಾ’ ಚಿತ್ರದ ಮೊದಲ ಬಾರಿಗೆ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಛಾಯಾಗ್ರಹಣ, VFX​, ಸಂಕಲನದ ಜವಾಬ್ದಾರಿಯನ್ನೂ ಪ್ರೀತಂ ನಿರ್ವಹಿಸಿದ್ದಾರೆ.

ಮಲೆಯಾಳಂ ಹಾಗೂ ಬಾಲಿವುಡ್​ ಗಳಲ್ಲಿ ಈಗಾಗಲೇ ಈ ರೀತಿಯ ವರ್ಚುವಲ್ ಸಿನಿಮಾಗಳು ತೆರೆಕಂಡಿವೆ. ಆದರೆ ಈ ಸಿನಿಮಾಗಳು ಕೇಲವ ಓಟಿಟಿ ಅಲ್ಲಿ ಬಿಡುಗಡೆಯಾಗಿದ್ದವು. ಆದರೆ ಕನ್ನಡದ ಮೊದಲ ವರ್ಚುವಲ್ ಸಿನಿಮಾವನ್ನು ಮಲ್ಟಿಫ್ಲೆಕ್ಸ್ ಗಳಲ್ಲಿಯೇ ಬಿಡುಗಡೆ ಮಾಡುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಪ್ರೀತಂ ಹೇಳಿದ್ದಾರೆ.