Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Cinema ಫ್ಯಾಷನ್ ಡಿಸೈನರ್ ಜೊತೆ ಹಸೆಮಣೆ ತುಳಿಯಲಿದ್ದಾರೆ ಜೆಕೆ

ಫ್ಯಾಷನ್ ಡಿಸೈನರ್ ಜೊತೆ ಹಸೆಮಣೆ ತುಳಿಯಲಿದ್ದಾರೆ ಜೆಕೆ

ಬೆಂಗಳೂರು, ಮೇ 31, 2022 (www.justkannada.in): ಕಿರುತೆರೆಯಲ್ಲಿ ‘ಅಶ್ವಿನಿನಕ್ಷತ್ರ’ ಸೀರಿಯಲ್ ಮೂಲಕ​ ಎಲ್ಲರ ಗಮನ ಸೆಳೆದ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹೌದು. ಜೆಕೆ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಜಯರಾಮ್​ ಕಾರ್ತಿಕ್​ ಕಾಲಿಡುತ್ತಿದ್ದಾರೆ.

ಜೆಕೆ ಫ್ಯಾಷನ್ ಡಿಸೈನರ್ ಚೆಲುವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾವಿ ಪತ್ನಿ ಜೊತೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಜೆಕೆ ಮದುವೆ ಆಗುತ್ತಿರುವ ಹುಡುಗಿಯ ಅರ್ಪಣ. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದು, ಫ್ಯಾಷನ್ ಲೋಕಕ್ಕೆ ಈಗಾಗಲೇ ಚಿರಪರಿಚಿತ ಆಗಿದ್ದಾರೆ. ಸಾಕಷ್ಟು ಮಾಡೆಲ್ ಗಳಿಗೆ ಹೊಸ ರೀತಿಯ ಫ್ಯಾಷನ್ ಡಿಸೈನ್ ಮಾಡಿದ್ದಾರೆ.