Sunday, August 23, 2026

BDA Apartments

Home Front Page ಬಿ.ವೈ ವಿಜಯೇಂದ್ರಗೆ ಎಂಎಲ್ಸಿ ಸ್ಥಾನ: ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದ ಸಿಎಂ ಬೊಮ್ಮಾಯಿ

ಬಿ.ವೈ ವಿಜಯೇಂದ್ರಗೆ ಎಂಎಲ್ಸಿ ಸ್ಥಾನ: ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು, ಮೇ 15, 2022 (www.justkannada.in): ಬಿ.ವೈ ವಿಜಯೇಂದ್ರಗೆ ಎಂಎಲ್ ಸಿ ಸ್ಥಾನ ನೀಡುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ವೈ ವಿಜಯೇಂದ್ರಗೆ ಎಂಎಲ್ ಸಿ ಸ್ಥಾನ ನೀಡುವ ಹೈಕಮಾಂಡ್ ನಿರ್ಧರಿಸುತ್ತದೆ. ವಿಧಾನಪರಿಷತ್, ರಾಜ್ಯಸಭಾ ಚುನಾವಣೆಯ ಸಿದ್ಧತೆಯಲ್ಲಿದ್ದೇವೆ. ನಾಳೆ ಅಥವಾ ನಾಡಿದ್ದು ಹೈಕಮಾಂಡ್ ಜೊತೆಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಆಯ್ಕೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಬೇರೆ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ಸಹಜ. ಬಿ.ವೈ. ವಿಜಯೇಂದ್ರಗೆ ಎಂಎಲ್ ಸಿ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.