Tuesday, September 29, 2026

BDA Apartments

ಹಲಾಲ್ ನಿಂದ ಬಂದ ಹಣ ಭಯೋತ್ಪಾದನೆಗೆ ಬಳಕೆ- ಪ್ರಮೋದ್ ಮುತಾಲಿಕ್ ಆರೋಪ BDA JK_Adv BDA Adv
Home Front Page ಹಲಾಲ್ ನಿಂದ ಬಂದ ಹಣ ಭಯೋತ್ಪಾದನೆಗೆ ಬಳಕೆ- ಪ್ರಮೋದ್ ಮುತಾಲಿಕ್ ಆರೋಪ.

ಹಲಾಲ್ ನಿಂದ ಬಂದ ಹಣ ಭಯೋತ್ಪಾದನೆಗೆ ಬಳಕೆ- ಪ್ರಮೋದ್ ಮುತಾಲಿಕ್ ಆರೋಪ.

ಬಾಗಲಕೋಟೆ,ಮಾರ್ಚ್,30,2022(www.justkannada.in): ಹಲಾಲ್ ಕಟ್ ಎನ್ನುವುದು ಆರ್ಥಿಕ ಜಿಹಾದ್. ಹಲಾಲ್ ನಿಂದ ಬಂದ ಹಣ ಭಯೋತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಪ್ರಮೋದ್ ಮುತಾಲಿಕ್,  ಹಲಾಲ್ ಹಿಂದೆ ಸಂಘಟನೆ ಇದೆ. ಹಲಾಲ್ ನಿಂದ ಬಂದ ಹಣವನ್ನ ಎಸ್ ಡಿಪಿಐ,ಪಿಎಫ್ ಐ ಮುಂತಾದ ಸಂಘಟನೆಗಳಿಗೆ  ಬಳಸಲಾಗುತ್ತಿದೆ. ಹಲಾಲ್ ನಿಂದ ಬಂದ ಹಣ ಭಯೋತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ .ಮುಸ್ಲೀಂಮೇತರರು ಮಾರುವ ಮಾಂಸ ಮುಸ್ಲಿಂರು ತಿನ್ನಲ್ಲ. ಹೀಗಾಗಿ ಹಲಾಲ್ ಮುಕ್ತ ಭಾರತ ಆಗಬೇಕೆಂಬ ಆಂದೋಲನ ಆರಂಭವಾಗಬೇಕು ಎಂದರು.

ಹಲಾಲ್ ಎಂಬ ಬ್ರಾಂಡ್ ಹಾಕಿ ವಿದೇಶದಲ್ಲಿ ಮಾರಾಟ ಮಾಡಿ ಸಾಕಷ್ಟು ಹಣ ಗಳಿಸುತ್ತಾರೆ.  ಬಳಿಕ ಈ ಹಣವನ್ನು ಮುಸ್ಲಿಂ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಹಲಾಲ್ ಮಾಡಿದ ಮಾಂಸವನ್ನೇ ತಿನ್ನಬೇಕು ಎಂದು ಮುಸ್ಲಿಮರು ಕರೆ ನೀಡಿದ್ದಾರೆ. ಈ ಮೂಲಕ ಜಗತ್ತಿನ ಆರ್ಥಿಕತೆಗೆ ಸೆಡ್ಡು ಹೊಡೆದು, ಇಸ್ಲಾಮಿಕ್ ಆರ್ಥಿಕತೆ ಬೆಳೆಸುತ್ತಿದೆ ಎಂದು ಕಿಡಿಕಾರಿದರು.

Key words: halal-Pramod muthalik- money-terrorism