Friday, September 18, 2026

BDA Apartments

Home Front Page ಕಾಶ್ಮೀರಿ ಫೈಲ್ಸ್ ಗಾಗಿ ಜೇಮ್ಸ್ ಸಿನಿಮಾ ಎತ್ತಂಗಡಿಗೆ ಬಿಜೆಪಿ ಶಾಸಕರಿಂದಲೇ ಒತ್ತಡ- ಮಾಜಿ ಸಿಎಂ ಸಿದ್ಧರಾಮಯ್ಯ...

ಕಾಶ್ಮೀರಿ ಫೈಲ್ಸ್ ಗಾಗಿ ಜೇಮ್ಸ್ ಸಿನಿಮಾ ಎತ್ತಂಗಡಿಗೆ ಬಿಜೆಪಿ ಶಾಸಕರಿಂದಲೇ ಒತ್ತಡ- ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ

ಬೆಂಗಳೂರು,ಮಾರ್ಚ್,22,2022(www.justkannada.in): ಕಾಶ್ಮೀರಿ ಫೈಲ್ಸ್ ಗಾಗಿ ಜೇಮ್ಸ್ ಸಿನಿಮಾ ಎತ್ತಂಗಡಿಗೆ ಬಿಜೆಪಿ ಶಾಸಕರಿಂದಲೇ ಒತ್ತಡ ಹಾಕಲಾಗುತ್ತಿದೆ ಎಂದು ವಿಪಕ್ಷ ನಾಯಕರ  ಸಿದ್ಧರಾಮಯ್ಯ ಆರೋಪ ಮಾಡಿದರು.

ಈ ಕುರಿತು ಮಾತಮಾಡಿದ ಸಿದ್ಧರಾಮಯ್ಯ, ಥೀಯೇಟರ್ ಗಳಲ್ಲಿ ಜೇಮ್ಸ್ ಎತ್ತಂಗಡಿಗೆ ಯತ್ನ ನಡೆಸಲಾಗುತ್ತಿದೆ. ಜೇಮ್ಸ್ ನಿಲ್ಲಿಸಲು ಬಿಜೆಪಿ ಶಾಸಕರೇ ಒತ್ತಡ ಹಾಕುತ್ತಿದ್ದಾರೆ. ಶೋ ರದ್ದಿಗೆ ಒತ್ತಡ ಹಾಕಿದ್ದಾರೆ. ಸಿನಿಮಾ ನಿರ್ಮಾಪಕರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಬಿಜೆಪಿಗರು ಜೇಮ್ಸ್ ನಿಲ್ಲಿಸೋದು ದೌರ್ಜನ್ಯ.  ಅಪ್ಪು ಅಭಿಮಾನಿಗಳು ಚಿತ್ರ ನೋಡುತ್ತಿದ್ದಾರೆ. ಯಾರಿಗೆ ಇಷ್ಟ ಿದೆಯೋ ನೋಡಲಿ ಬಿಡಿ. ಜೇಮ್ಸ್ ಗೆ ತೆರಿಗೆ ವಿನಾಯಿತಿ ನೀಡಲಿ ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.  

ಜಾತ್ರೆಗಳಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮುಸ್ಲೀಂ ಅಂಗಡಿಗೆ ಅವಕಾಶ ನೀಡದಿರೋದು ತಪ್ಪು.  ಈ ರೀತಿ ಅವಕಾಶ ನಿರಾಕರಣೆ ದೌರ್ಜನ್ಯ.  ಮುಸ್ಲೀಂರ ಮೂಲಭೂತ ಹಕ್ಕು ಕಿತ್ತು ಕೊಂಡಂತಾಗುತ್ತದೆ ಎಂದು ಕಿಡಿಕಾರಿದರು.

Key words: Siddaramaiah-BJP MLA -James -Cinema