Tuesday, August 4, 2026

BDA Apartments

Home Cinema ಅಪ್ಪು ನಮ್ಮೆಲ್ಲರಿಗೂ ಪ್ರೇರಣೆ, ಆದರ್ಶವಾಗಿದ್ದಾರೆ- ಹುಟ್ಟುಹಬ್ಬದ ಶುಭಕೋರಿದ ಸಿಎಂ ಬಸವರಾಜ ಬೊಮ್ಮಾಯಿ.

ಅಪ್ಪು ನಮ್ಮೆಲ್ಲರಿಗೂ ಪ್ರೇರಣೆ, ಆದರ್ಶವಾಗಿದ್ದಾರೆ- ಹುಟ್ಟುಹಬ್ಬದ ಶುಭಕೋರಿದ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,17,2022(www.justkannada.in):  ಇಂದು ನಟ ಪವರ್ ಸ್ಟಾರ್  ದಿ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು ಎಂದು ಸಿಎಂ ಬೊಮ್ಮಾಯಿ ಅಪ್ಪು ಸಾಧನೆಯನ್ನ ಸ್ಮರಿಸಿದ್ದಾರೆ.

ಇನ್ನು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ದಿವಂಗತ ನಟ ಪುನೀತ್ ರಾಜ್ ಕುಮಾರ್ ಗೆ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಇದೀಗ ಈ ಪ್ರಶಸ್ತಿಯನ್ನು ಶೀಘ್ರವೇ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಅಪ್ಪು ಅಂಗಾಂಗ ದಾನ ಮಾಡುವ ಮೂಲಕ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ.  ಅವರ ಆದರ್ಶ ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಅವರೆಂದೂ ಅಭಿಮಾನಿಗಳು, ಆರಾಧಕರ ಹೃದಯದಲ್ಲಿ ಜೀವಂತವಾಗಿದ್ದಾರೆ ಎಂದರು.

Key words:  punith rajkumar-birthday- cm-Bommai