Wednesday, July 29, 2026

BDA Apartments

Home Front Page ಇನ್ನೆರೆಡು ದಿನಗಳಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಏರ್ ಲಿಫ್ಟ್- ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ.

ಇನ್ನೆರೆಡು ದಿನಗಳಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಏರ್ ಲಿಫ್ಟ್- ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ.

ನವದೆಹಲಿ,ಮಾರ್ಚ್,5,2022(www.justkannada.in): ಇನ್ನೆರೆಡು ದಿನಗಳಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಏರ್ ಲಿಫ್ಟ್ ಮಾಡುತ್ತೇವೆ ಎಂದು ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ, ಉಕ್ರೇನ್ ನಲ್ಲಿ 19 700 ಭಾರತೀಯ ವಿದ್ಯಾರ್ಥಿಗಳು  ಇದ್ದರು. ಈ ಪೈಕಿ  ಯುದ್ದ ಆರಂಭಕ್ಕೂ ಮುನ್ನ 4000  ವಿದ್ಯಾರ್ಥಿಗಳು ವಾಪಸ್ ಆಗಿದ್ದರು. ಬಳಿಕ 15 ಸಾವಿರ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದರು.

ಸದ್ಯ ರೊಮೇನಿಯಾ ಮೂಲಕ 6000 ಸಾವಿರ ವಿದ್ಯಾರ್ಥಿಗಳನ್ನ ವಾಪಸ್ ಕರೆ ತರಲಾಗಿದೆ ಎಂದು ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

Key words: Air lift – students – Ukraine-Union Minister-Jyotiraditya Scindia