Friday, August 14, 2026

BDA Apartments

Home Front Page ಕಾವೇರಿಯ ಪ್ರತಿ ಹನಿ ಮೇಲೆ ಕನ್ನಡಿಗರ ಹಕ್ಕಿದೆ: ಇಲ್ಲಿ ಸೃಷ್ಠಿಯಾದ ಕೂಗಿಗೆ ನ್ಯಾಯ ಸಿಗುತ್ತೆ- ರಣದೀಪ್...

ಕಾವೇರಿಯ ಪ್ರತಿ ಹನಿ ಮೇಲೆ ಕನ್ನಡಿಗರ ಹಕ್ಕಿದೆ: ಇಲ್ಲಿ ಸೃಷ್ಠಿಯಾದ ಕೂಗಿಗೆ ನ್ಯಾಯ ಸಿಗುತ್ತೆ- ರಣದೀಪ್ ಸಿಂಗ್ ಸುರ್ಜೇವಾಲಾ.

ರಾಮನಗರ,ಫೆಬ್ರವರಿ,27,2022(www.justkannada.in): ಕಾವೇರಿಯ ಪ್ರತಿ ಹನಿ ಮೇಲೆ ಕನ್ನಡಿಗರ ಹಕ್ಕಿದೆ.  ಇಲ್ಲಿ ಸೃಷ್ಠಿಯಾದ ಕೂಗಿಗೆ ನ್ಯಾಯ ಸಿಗುತ್ತೆ. ಕಾವೇರಿ ತಾಯಿ ನ್ಯಾಯ ಕೊಡುತ್ತಾಳೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ನುಡಿದರು.

ಕಾಂಗ್ರೆಸ್ ಮೇಕೆದಾಟು 2ನೇ ಹಂತದ ಪಾದಯಾತ್ರೆ ಇಂದು ಪ್ರಾರಂಭವಾಗಿದ್ದು ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ, ಉದ್ದುದ್ದ ಭಾಷಣ ಮಾಡುವ ದಿನ ಇದಲ್ಲ.  ಇದು ಹೊಸ ಇತಿಹಾಸ ಬರೆಯುವ ದಿನ. ಕಾವೇರಿ ನೀರು ನಮ್ಮ ಅಧಿಕಾರ. ರೈತರು, ಯುವಕರು ಸೇರಿದಂತೆ ಪ್ರತಿಯೊಬ್ಬ ನಡಿಗೆಯಲ್ಲಿ ಸಾಗಿದರೆ ಗೆಲುವಿಗಾಗಿ ಕಾವೇರಿ ತಾಯಿಯೇ ದಾರಿ ಮಾಡಿಕೊಡಲಿದ್ದಾಳೆ ಎಂದರು.

ಮೇಕೆದಾಟು ಅಧಿಕಾರಕ್ಕೆ ಯಾರಾದರು ಅಡ್ಡಗಲಾಗಿದ್ದರೆ ಅದು ಬೆಂಗಳೂರಲ್ಲಿ ಕುಳಿತಿರುವ ಬಿಜೆಪಿ ಸರ್ಕಾರ ಕಾರಣ ಎಂದು ಕಿಡಿಕಾರಿದರು. ರಾಮನಗರದ ಟಿ.ಆರ್. ಮಿಲ್‌ ಮೈದಾನನಿಂದ ಪಾದಾಯಾತ್ರೆ ಆರಂಭವಾಗಿದ್ದು, ಹಲವು ಕಾಂಗೇಸ್ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

Key words: congress-mekadatu-padayatra