Tuesday, October 6, 2026

BDA Apartments

immense respect BDA JK_Adv BDA Adv
Home Cinema ಕೆಜಿಎಫ್-2 ನಿರ್ಮಾಪಕರಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದೇಕೆ ?!

ಕೆಜಿಎಫ್-2 ನಿರ್ಮಾಪಕರಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದೇಕೆ ?!

ಬೆಂಗಳೂರು, ಫೆಬ್ರವರಿ 23, 2022 (www.justkannada.in): ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದಲ್ಲಿ ‘ಕೆಜಿಎಫ್ 2’ ಸಿನಿಮಾ ಬಗ್ಗೆ ಅವರೂ ಕಾತುರರಾಗಿದ್ದು, ಸಿನಿಮಾ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ!

ಈ ಪತ್ರವನ್ನು ಹೊಂಬಾಳೆ ಫಿಲಂಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ‘ಕೆಜಿಎಫ್ 2’ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್‌ಗೆ ಪತ್ರ ಬರೆದಿರುವ ವಿಷಯ ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗುತ್ತಿದೆ!

1.3 ಬಿಲಿಯನ್ ಭಾರತೀಯರ ಪರವಾಗಿ, ನನ್ನ ಜವಾಬ್ದಾರಿಯಿಂದ ಕೇಳುತ್ತಿದ್ದೇನೆ. ‘ಕೆಜಿಎಫ್ 2’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಬೇಕೆಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಳಿ ಕೇಳಿಕೊಳ್ಳುತ್ತೇನೆ. ಎಂಬರ್ಥದಲ್ಲಿ ಪತ್ರ ಬರೆಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಕೆಜಿಎಫ್ 2’ ಚಿತ್ರದ ನಿರ್ಮಾಪಕರಿಗೆ ಬರೆದ ಪತ್ರವೊಂದು ಹರಿದಾಡುತ್ತಿದೆ. ಅಂದಹಾಗೆ ಇದು ಮೋದಿ ಬರೆದಿದ್ದಾರೆ ಎನ್ನಲಾದ ಪತ್ರ ಅಪ್ಪಟ ನಕಲಿ. ಇದನ್ನು ಅಭಿಮಾನಿಗಳೇ ಬೇಸತ್ತು ನಕಲು ಮಾಡಿದ ಪತ್ರ!!