Tuesday, August 18, 2026

BDA Apartments

Home Front Page ಸಚಿವ ಈಶ್ವರಪ್ಪ ವಜಾಗೊಳಿಸುವಂತೆ ಆಗ್ರಹ: ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ.

ಸಚಿವ ಈಶ್ವರಪ್ಪ ವಜಾಗೊಳಿಸುವಂತೆ ಆಗ್ರಹ: ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ.

ಬಳ್ಳಾರಿ,ಫೆಬ್ರವರಿ,19,2022(www.justkannada.in): ಸಚಿವ ಸ್ಥಾನದಿಂದ ಕೆ.ಎಸ್ ಈಶ್ವರಪ್ಪರನ್ನ ವಜಾ ಮಾಡುವಂತೆ ಆಗ್ರಹಿಸಿ ಬಳ್ಳಾರಿ ಬಿಜೆಪಿ ಕಚೇರಿ ಮುಂದೆ ಯೂತ್ ಕಾಂಗ್ರೆಸ್ ಕಾರ್ಯಕರ್ತ ಪ್ರತಿಭಟನೆ ನಡೆಸಿದರು.

ಸಚಿವ ಈಶ್ವರಪ್ಪ ವಿರುದ್ಧ ಬಳ್ಳಾರಿ ಬಿಜೆಪಿ ಕಚೇರಿ  ಎದುರು ಜಮಾಯಿಸಿದ  ಯೂತ್ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆ ಮೇಲೆ ಕುಳಿತು ಸಚಿವ ಈಶ್ವರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ, ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ನಾಯಕರು ಬಾಯಿಕಟ್ಟಿ ಹಾಕಿರಿ. ನಾಚಿಕೆ ಇಲ್ಲದ ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ. ಸಚಿವ ಸ್ಥಾನದಿಂದ ಈಶ್ವರಪ್ಪರನ್ನ ವಜಾ ಮಾಡುವಂತೆ ಆಗ್ರಹಿಸಿದರು.

Key words: congress-protest-hubli