ಗದಗ,ಫೆಬ್ರವರಿ,13,2022(www.justkannada.in): ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಗದಗದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಯಾವನೋ ಈಶ್ವರಪ್ಪ ಅಂತೆ ತಲೆಕೆಟ್ಟ ಈಶ್ವರಪ್ಪ ಸಿಎಂ ಬೊಮ್ಮಾಯಿ, ಗವರ್ನರ್ ಇಟ್ಟುಕೊಂಡು ಕುಂತವ್ರೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ 10 ನಿಮಿಷದಲ್ಲಿ ಅವನ ರಾಜೀನಾಮೆ ಪಡೆಯುತ್ತಿದ್ದವು. ಸಿಎಂ ಬೊಮ್ಮಾಯಿ ಒಂದು ಮಾತನ್ನೂ ಆಡಿಲ್ಲ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರಾ ಎಂದು ಕಿಡಿಕಾರಿದರು.
ಹಾಗೆಯೇ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಬೇಕು. ಸಂಪುಟದಿಂದ ಈಶ್ವರಪ್ಪರನ್ನ ತೆಗೆಯಬೇಕು ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
Key words: DK Shivakumar-ks Eshwarappa-CM- Bommai






