Thursday, August 20, 2026

BDA Apartments

Home Front Page ಈ ಬಾರಿ ‘ತಾಯಿ’ ಎಂಬ ಶೀರ್ಷಿಕೆಯಡಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ- ಅಡ್ಡಂಡ ಕಾರ್ಯಪ್ಪ

ಈ ಬಾರಿ ‘ತಾಯಿ’ ಎಂಬ ಶೀರ್ಷಿಕೆಯಡಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ- ಅಡ್ಡಂಡ ಕಾರ್ಯಪ್ಪ

ಮೈಸೂರು,ಫೆಬ್ರವರಿ,12,2022(www.justkannada.in): ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಮಾರ್ಚ್ 11ರಿಂದ  ನಡೆಯಲಿದೆ. ಈ ಬಾರಿ ತಾಯಿ” ಎಂಬ ಶೀರ್ಷಿಕೆಯಡಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ಕೊರೊನಾ ಸೋಂಕಿನ ಪ್ರಮಾಣ ಇಳಿಕೆ ಇಳಿಕೆ ಹಿನ್ನಲೆ ರಂಗೋತ್ಸವ ಆರಂಭ ಮಾಡಲಾಗುತ್ತಿದೆ ಮಾ.11ರಿಂದ ಮಾ.20ರ ವರೆಗೆ ಹತ್ತು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ತಾಯಿ ಬಗ್ಗೆ ವಿಸ್ತೃತ ಚರ್ಚೆಯನ್ನೊಳಗೊಂಡ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದ್ದು,  ಜಮೀನು, ಜಲ, ಜಾನುವಾರು, ಜಂಗಲ್, ಜನ ಎಂಬ ಪಂಚಸೂತ್ರದಲ್ಲಿ ತಾಯಿ ಮತ್ತು ತಾಯ್ತನ ನೋಡುವ ಪ್ರಯತ್ನ ಮಾಡಲಾಗುತ್ತದೆ.

ವಿವಿಧ ರಾಜ್ಯ, ಜಿಲ್ಲೆಗಳ ಶ್ರೇಷ್ಠ ನಾಟಕಗಳ ಪ್ರದರ್ಶನ, ಜಾನಪದ ಕಲಾಪ್ರದರ್ಶನ, ಚಲನಚಿತ್ರೋತ್ಸವ, ಪುಸ್ತಕ ಪ್ರದರ್ಶನ, ಕರಕುಶಲ ಪ್ರದರ್ಶನ, ಪ್ರಾತ್ಯಕ್ಷಿಕೆ, ಆಹಾರ ಮೇಳ ಸೇರಿ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ವಿವಿಧ ರಾಜ್ಯ, ವಿವಿಧ ಭಾಷೆಗಳ ಒಟ್ಟು 35 ನಾಟಕಗಳನ್ನ ಪ್ರದರ್ಶನ ಮಾಡಲಾಗುತ್ತದೆ. ಈ ಬಾರಿಯ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ರಾಷ್ಟ್ರ ಪ್ರಖ್ಯಾತ ಶಬಾನಾ ಆಜ್ಮಿ, ನಾಸಿರುದ್ದೀನ್ ಶಾ, ಅಮೋಲ್ ಪಾರೇಕರ್, ಇರ್ಫಾನ್ ಖಾನ್, ಶ್ರೀಲಂಕಾದ ಪರಾಕ್ರಮ ನಿರಿಯಲ್ಲ, ಡಾ.ಗಿರೀಶ್ ಕಾರ್ನಾಡ್, ಪ್ರಸನ್ನ, ಅನಂತ್ ನಾಗ್ ಸೇರಿ ಇತರ ಹಿರಿಯ ರಂಗ ಕಲಾವಿದರಿಂದ ಬಹುರೂಪಿ ಉದ್ಘಾಟನೆ ಮಾಡಲಾಗುತ್ತದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.

Key words: mysore- rangayana-Director –addanda cariappa