Tuesday, September 15, 2026

BDA Apartments

ಟೀಂ ಇಂಡಿಯಾ ಬೌಲರ್’ಗಳ ಬಗ್ಗೆ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆ BDA JK_Adv BDA Adv
Home Front Page ಟೀಂ ಇಂಡಿಯಾ ಬೌಲರ್’ಗಳ ಬಗ್ಗೆ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆ

ಟೀಂ ಇಂಡಿಯಾ ಬೌಲರ್’ಗಳ ಬಗ್ಗೆ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆ

ಬೆಂಗಳೂರು, ಫೆಬ್ರವರಿ 01, 2022 (www.justkannada.in): ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಟೀಂ ಇಂಡಿಯಾ ವೇಗಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಎಲ್ಲೆಡೆ ತೀವ್ರ ಟೀಕೆ ವ್ಯಕ್ತವಾಗಿದೆ.

ಭಾರತೀಯ ಆಹಾರ ಪದ್ಧತಿಗೆ ಬಗ್ಗೆ ಮಾತನಾಡಿದ್ದಾರೆ. ಜತೆಗೆ ನಾವು ಮಾಂಸಾಹಾರ ಸೇವಿಸುತ್ತೇವೆ. ಸಿಂಹದಂತೆ ಭೇಟೆಯಾಡುತ್ತೇವೆ. ಆದರೆ ಟೀಂ ಇಂಡಿಯಾ ವೇಗಿಗಳಿಗೆ ಧಮ್ಮಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

ವೇಗದ ಬೌಲಿಂಗ್‌ನಲ್ಲಿ ಪಾಕಿಸ್ತಾನದ ವೇಗಿಗಳ ಪ್ರಾಬಲ್ಯದ ಬಗ್ಗೆ ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಜೊತೆ ಮಾತನಾಡುತ್ತಾ ನೀಡಿರುವ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.