Friday, July 31, 2026

BDA Apartments

Home Front Page ಕೇಂದ್ರ ಬಜೆಟ್ : ರಾಜ್ಯಕ್ಕೆ ಹಲವು ಯೋಜನೆಗಳಿಗೆ ಅನುದಾನ ಸಿಗುವ ನಿರೀಕ್ಷೆ ಇದೆ- ಸಿಎಂ ಬಸವರಾಜ...

ಕೇಂದ್ರ ಬಜೆಟ್ : ರಾಜ್ಯಕ್ಕೆ ಹಲವು ಯೋಜನೆಗಳಿಗೆ ಅನುದಾನ ಸಿಗುವ ನಿರೀಕ್ಷೆ ಇದೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಫೆಬ್ರವರಿ,1,2022(www.justkannada.in):  ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ  ಹಲವು ಯೋಜನೆಗಳಿಗೆ ಅನುದಾನ ಸಿಗುವ ನೀರಿಕ್ಷೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಉತ್ತಮ ಬಜೆಟ್ ಮಂಡಿಸುವ ವಿಶ್ವಾಸವಿದೆ. ರಾಜ್ಯದ ಹಲವು ಯೋಜನೆಗಳಿಗೆ ಅನುದಾನ ಸಿಗುವ ನಿರೀಕ್ಷೆ ಇದೆ. ನಮ್ಮ ಆರ್ಥಿಕತ ಚೇತರಿಕೆಯಾಗುತ್ತಿದೆ.  ಆರ್ಥಿಕ ಬೆಳವಣಿಗೆಗೆ ಪೂರಕ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಕರ್ನಾಟಕಕ್ಕೆ ರಾಷ್ಟ್ರಿಯ ಹೆದ್ದಾರಿ ರೈಲ್ವೆ ಹಯೋಜನೆ ಉದ್ಯಮಗಳಿಗೆ ಹೆಚ್ಚು ಉತ್ತೇಜನ ನೀಡುವ ನಿರೀಕ್ಷೆ ಇದೆ.  ಇಂದು ಕೇವಲ ಬಜೆಟ್ ಭಾಷಣ ಮಾಡುತ್ತಾರೆ  ಪೂರ್ಣಪ್ರಮಾಣದ ಮಾಹಿತಿ ತಿಳಿಯಲು 2 ದಿನ ಬೇಕು. ಇಲಾಖಾವಾರು ಮಾಹಿತಿ ತಿಳಿಯುಲು 2 ದಿನ ಬೇಕಾಗುತ್ತದೆ. ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Central budget-many project-  CM Basavaraja Bommai.