Saturday, September 12, 2026

BDA Apartments

ಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆ BDA JK_Adv BDA Adv
Home Crime ಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆ

ಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆ

ಬೆಂಗಳೂರು, ಜನವರಿ 28, 2021 (www.justkannada.in): ಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆಯಾಗಿದ್ದು, ಕೆಎಂಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ತುಪ್ಪ ತಯಾರಿಕೆ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಷಯ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದ ಜನ ಬೆಚ್ಚಿಬಿದ್ದಿದ್ದರು.

ಇದೀಗ  ಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆಯಾಗಿದ್ದು, ಕೆಎಂಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು ಹಾಗೂ ಸುತ್ತಮುತ್ತ ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಹಲವು ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಿ ಕೆಎಂಎಫ್ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿದ್ದಾರೆ.