Tuesday, August 4, 2026

BDA Apartments

Home Front Page ಫೆಬ್ರವರಿ ಮೊದಲ ವಾರದಲ್ಲಿ ಕೊರೋನಾ ಹೆಚ್ಚಳ: ಜನರ ಜೀವ ಜೀವನ ಕಾಪಾಡುವ ನಿಟ್ಟಿನಲ್ಲಿ ನಿರ್ಧಾರ –...

ಫೆಬ್ರವರಿ ಮೊದಲ ವಾರದಲ್ಲಿ ಕೊರೋನಾ ಹೆಚ್ಚಳ: ಜನರ ಜೀವ ಜೀವನ ಕಾಪಾಡುವ ನಿಟ್ಟಿನಲ್ಲಿ ನಿರ್ಧಾರ – ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಜನವರಿ,21,2022(www.justkannada.in): ಫೆಬ್ರವರಿ ಮೊದಲ ವಾರದಲ್ಲಿ ಕೊರೋನಾ ಹೆಚ್ಚಳವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಜನವರಿ ಅಂತ್ಯದೊಳಗೆ ಕೊರೋನಾ ಪೀಕ್ ಗೆ ಹೋಗಲಿದೆ. ಫೇಬ್ರವರಿ ಮೊದಲ ವಾರದಲ್ಲಿ ಕೊರೋನಾ ಹೆಚ್ಚಳವಾಗಲಿದೆ. ತಜ್ಞರು ಈಗಾಗಲೇ ವರದಿ ನೀಡಿದ್ದಾರೆ.  ಜನರ ಜೀವ ಜೀವನ ಕಾಪಾಡುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಶುಕ್ರವಾರ ಇನ್ನೂ ಶುಭವಾಗಿರಲಿದೆ.  ಜನರಿಗೆ ಪೂರಕವಾದಂತಹ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಸಿಎಂ ಬೊಮ್ಮಯಿ ತುಮಕೂರಿನಿಂದ ಬಂದ ಬಳಿಕ ಸಭೆ ನಡೆಯಲಿದೆ ಎಲ್ಲರ  ಅಭಿಪ್ರಾಯ ಪಡೆದು ಚರ್ಚಿಸುತ್ತೇವೆ. ಐಸಿಯು ವೆಂಟೀಲೇಟರ್ ನಲ್ಲಿರುವವರು ಬಹಳ ಕಡಿಮೆ,  ಇದು ಒಳ್ಳೆಯ ಸೂಚನೆಯಾಗಿದೆ. ಸೋಂಕಿತ ಪ್ರಕರಣಗಳಷ್ಟೇ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.

Key words: Corona- increase – first week –February-Minister -Dr. K. Sudhakar.