Sunday, September 27, 2026

BDA Apartments

ಭಾರತೀಯ ಸೇನೆಗೆ ಹೊಸ ಸಮವಸ್ತ್ರ: ಇವೆ ಹಲವು ವೈಶಿಷ್ಟ್ಯ BDA JK_Adv BDA Adv
Home Front Page ಭಾರತೀಯ ಸೇನೆಗೆ ಹೊಸ ಸಮವಸ್ತ್ರ: ಇವೆ ಹಲವು ವೈಶಿಷ್ಟ್ಯ

ಭಾರತೀಯ ಸೇನೆಗೆ ಹೊಸ ಸಮವಸ್ತ್ರ: ಇವೆ ಹಲವು ವೈಶಿಷ್ಟ್ಯ

ಬೆಂಗಳೂರು, ಜನವರಿ 17, 2022 (www.justkannada.in): ಭಾರತೀಯ ಸೇನೆಗೆ ಹೊಸ ಸಮವಸ್ತ್ರ ಸಿಕ್ಕಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ನಿನ್ನೆ ನಡೆದ ಪರೇಡ್‌ನಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಯೋಧರು ಹೊಸ ಸಮವಸ್ತ್ರ ಧರಿಸಿದ್ದರು. ನೂತನ ಸಮವಸ್ತ್ರ ಹೆಚ್ಚು ಆರಾಮದಾಯಕ, ಪರಿಸರ ಸ್ನೇಹಿ ಮತ್ತು ಆಕರ್ಷಕ ವಿನ್ಯಾಸ ಹೊಂದಿದೆ.

ಯೋಧರು ಕಾರ್ಯನಿರ್ವಹಿಸುವ ತಾಣ ಮತ್ತು ಅಲ್ಲಿನ ಯಾವುದೇ ವಾತಾವರಣಕ್ಕೆ ಪೂರಕವಾಗುವಂತೆ ನೂತನ ಸಮವಸ್ತ್ರ ವಿನ್ಯಾಸ ಮಾಡಲಾಗಿದೆ.

ಆಲಿವ್ ಮತ್ತು ಆರ್ತ್‌ನ್ ಮಿಶ್ರಣದ ಹಾಗೂ ವಿವಿಧ ರಾಷ್ಟ್ರಗಳ ಸೇನೆಯ ಯೋಧರ ಸಮವಸ್ತ್ರವನ್ನು ಅಧ್ಯಯನ ಮಾಡಿ, ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಹಯೋಗದಲ್ಲಿ ಹೊಸ ವಿನ್ಯಾಸ ಅಭಿವೃದ್ಧಿಪಡಿಸಲಾಗಿದೆ.