Thursday, August 6, 2026

BDA Apartments

Home Front Page ಒಮಿಕ್ರಾನ್ ಬಗ್ಗೆ ಯಾವುದೇ ಆತಂಕ ಬೇಡ:ಕೋವಿಡ್ 3ನೇ ಅಲೆ ದೀರ್ಘ ಕಾಲ ಉಳಿಯಲ್ಲ- ಸಚಿವ ಡಾ.ಕೆ.ಸುಧಾಕರ್.

ಒಮಿಕ್ರಾನ್ ಬಗ್ಗೆ ಯಾವುದೇ ಆತಂಕ ಬೇಡ:ಕೋವಿಡ್ 3ನೇ ಅಲೆ ದೀರ್ಘ ಕಾಲ ಉಳಿಯಲ್ಲ- ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಜನವರಿ,5,2022(www.justkannada.in): ಒಮಿಕ್ರಾನ್ ಬಗ್ಗೆ ಯಾವುದೇ ಆತಂಕ ಬೇಡ. ಎರಡು ಡೋಸ್ ಲಸಿಕೆ ಪಡೆದರೇ ಪರಿಣಾಮ ಕಡಿಮೆಯಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೊರೋನಾ 3ನೇ ಅಲೆ ದೀರ್ಘಕಾಲ ಉಳಿಯಲ್ಲ. ಒಮಿಕ್ರಾನ್ ನಿಂದ ಶ್ವಾಸಕೋಶಕ್ಕೆ ತೊಂದರೆ ಆಗಲ್ಲ. ಕೊರೋನಾ ತಡೆಗೆ ಜನರ ಸಹಕಾರ ಅಗತ್ಯವಾಗಿದೆ. ಜನರು ಸಹಕರಿಸಿದರೇ ಕೊರೋನಾ ನಿಯಂತ್ರಣ ಸಾಧ್ಯ ಎಂದರು.

ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಸಿಕ್ಕಿದೆ.  ನಾಲ್ವರಲ್ಲಿ ಒಬ್ಬ ಮಗುವಿಗೆ ಲಸಿಕೆ ನೀಡಲಾಗಿದೆ  1 ಡೋಸ್ ಕೊಟ್ಟ 28 ದಿನಗಳ ಬಳಿಕ 2ನೇ ಡೋಸ್ ಲಸಿಕೆ ನೀಡಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: No worries –about- Omicron-Minister -Dr. K. Sudhakar