Friday, August 14, 2026

BDA Apartments

Home Cinema ‘ಬುರ್ಖಾ’ ಧರಿಸಿ ಥಿಯೇಟರ್’ನಲ್ಲಿ ಜನರೊಂದಿಗೆ ಸಿನಿಮಾ ನೋಡಿದ ಸಾಯಿ ಪಲ್ಲವಿ

‘ಬುರ್ಖಾ’ ಧರಿಸಿ ಥಿಯೇಟರ್’ನಲ್ಲಿ ಜನರೊಂದಿಗೆ ಸಿನಿಮಾ ನೋಡಿದ ಸಾಯಿ ಪಲ್ಲವಿ

ಬೆಂಗಳೂರು, ಡಿಸೆಂಬರ್ 31, 2021 (www.justkannada.in): ‘ಬುರ್ಖಾ’ ಧರಿಸಿ ಹೈದರಾಬಾದ್‌ನ ಜನನಿಬಿಡ ಥಿಯೇಟರ್‌ಗೆ ಭೇಟಿ ನೀಡಿ ಸಿನಿಮಾ ನೋಡಿದ್ದಾರೆ ನಟಿ ಸಾಯಿ ಪಲ್ಲವಿ.

ಹೌದು. ‘ಶ್ಯಾಮ್ ಸಿಂಗ ರಾಯ್’  ಚಿತ್ರದಲ್ಲಿ ರೋಸಿಯಾಗಿ ಪ್ರೇಕ್ಷಕರನ್ನು ಆಕರ್ಷಿಸಿದ್ದ ನಟಿ ಸಾಯಿ ಪಲ್ಲವಿ ಇದೀಗ ಹೊಸ ವಿಷಯಕ್ಕೆ ಸುದ್ದಿಯಾಗಿದ್ದಾರೆ.

‘ಬುರ್ಖಾ’ ಧರಿಸಿ ಥಿಯೇಟರ್ ಗೆ ಬಂದಿದ್ದ ಸಾಯಿ ಪಲ್ಲವಿ, ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ಪ್ರದರ್ಶನದ ಸಮಯದಲ್ಲಿ ಅವರ ಪ್ರತಿಕ್ರಿಯೆಗಳನ್ನು ವೀಕ್ಷಿಸಿದ್ದಾರೆ.

ತಮ್ಮ ಗುರುತು ಮರೆಮಾಚಲು ‘ಬುರ್ಖಾ’ ಧರಿಸಿ ಹೈದರಾಬಾದ್‌ನ ಜನನಿಬಿಡ ಥಿಯೇಟರ್‌ಗೆ ಭೇಟಿ ನೀಡಿದ ವಿಷಯವನ್ನು ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.