Tuesday, August 4, 2026

BDA Apartments

Home Front Page ಖುದ್ಧು ಸೈಕಲ್ ಏರಿ ಅಪರಾಧಗಳ ಬಗ್ಗೆ ಅರಿವು ಮೂಡಿಸಿದ ಮೈಸೂರು ನಗರ ಪೊಲೀಸ್ ಕಮೀಷನರ್.

ಖುದ್ಧು ಸೈಕಲ್ ಏರಿ ಅಪರಾಧಗಳ ಬಗ್ಗೆ ಅರಿವು ಮೂಡಿಸಿದ ಮೈಸೂರು ನಗರ ಪೊಲೀಸ್ ಕಮೀಷನರ್.

ಮೈಸೂರು,ಡಿಸೆಂಬರ್,25,2021(www.justkannada.in): ಮೈಸೂರು ನಗರ ಪೊಲೀಸರಿಂದ ಇಂದು ನಗರದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಅಪರಾಧಗಳ ಕುರಿತು  ಅರಿವು ಮೂಡಿಸುವ ಸಲುವಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ,ಚಂದ್ರಗುಪ್ತ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು  ಭಿತ್ತಿಚಿತ್ರ ಇರುವ ಟ್ರಿನ್ ಟ್ರಿನ್ ಸೈಕಲ್ ಗಳ ಮೂಲಕ ಜಾಥಾ ನಡೆಸಿ ಅಪರಾಧಗಳ ಬಗ್ಗೆ ಅರಿವು ಮೂಡಿಸಲಾಯಿತು.

ಈ ವೇಳೆ ಖುದ್ಧು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೈಕಲ್ ಏರಿ ಅಪರಾಧಗಳ ಬಗ್ಗೆ ಅರಿವು ಮೂಡಿಸಿದರು. ಇದೇ ವೇಳೆ ಅಪರಾಧಗಳ ಅರಿವು ಮತ್ತು ಕಾನೂನುಗಳ ಬಗ್ಗೆ ಬೆಳಕು ಚೆಲ್ಲುವ ಗೋಡೆ ಚಿತ್ರಗಳ ಅನಾವರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಭಾಗಿಯಾಗಿದ್ದರು.

Key words: Mysore- city -police -commissioner -aware – crimes – bicycle.