ಲಿಂಗಾಯತರೂ  ಹಿಂದೂಗಳೇ: ಈ ಸಂಬಂಧ ಯಾವುದೇ ಚರ್ಚೆಗೆ ನಾನು ಸಿದ್ಧ- ಮೈಸೂರಿನಲ್ಲಿ ಪಂಥಾಹ್ವಾನ ನೀಡಿದ ಪೇಜಾವರ ಶ್ರೀಗಳು..

ಮೈಸೂರು,ಜು,30,2019(www.justkannada.in):  ಲಿಂಗಾಯತರು ಹಿಂದೂಗಳೇ ಆಗಿದ್ದಾರೆ. ಈ ಸಂಬಂಧ ಯಾವುದೇ ಚರ್ಚೆಗೆ ನಾನು ಸಿದ್ಧ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಪಂಥಾಹ್ವಾನ ನೀಡಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಲಿಂಗ, ಇಷ್ಟಲಿಂಗ, ಶಿವನನ್ನು  ಆರಾಧನೆ ಮಾಡುವ ಎಲ್ಲರೂ ಹಿಂದೂಗಳೇ ಆಗಿದ್ದಾರೆ. ವರ್ಣಾಶ್ರಮವನ್ನು ಒಪ್ಪಲಿ, ಒಪ್ಪದೇ ಇರಲಿ ಶಿವನ ಆರಾಧನೆ ಮಾಡಿದರೆ ಹಿಂದೂಗಳಾಗುತ್ತಾರೆ. ಹಿಂದೂಗಳೆಲ್ಲರೂ ಸಹೋದರರಂತೆ ಇರಬೇಕು. ಈ ವಿಚಾರದ ಬಗ್ಗೆ ನನ್ನ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದೇನೆ ಎಂದರು.

ಯಾವುದೇ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನನ್ನೊಂದಿಗೆ ಸಂವಾದ ನಡೆಸುವ ಧೈರ್ಯ ಯಾರಿಗೂ ಇಲ್ಲ. ಪುಸ್ತಕ ಬರೆಯುತ್ತೇನೆ, ಪತ್ರದ ಮೂಲಕ ಚರ್ಚೆ ಮಾಡುತ್ತೇನೆ ಎನ್ನುತ್ತಾರೆ. ಪುಸ್ತಕ ಕಳುಹಿಸಿಕೊಡಲಿ, ಉತ್ತರ ನೀಡಲು ನಾನು ಸಿದ್ಧನಿದ್ದೇನೆ. ಅದೆಲ್ಲವೂ ದೀರ್ಘಕಾಲದ ಪ್ರಕ್ರಿಯೆ. ಮುಖಾಮುಖಿಯಾಗಿ ಸಂವಾದ ಮಾಡುವುದು ಒಳ್ಳೆಯದ್ದು. ನಾನು ಚಾತುರ್ಮಾಸ ವ್ರತ ಮಾಡುತ್ತಿದ್ದೇನೆ. ಮೈಸೂರಿನ ಯಾವುದಾದರೂ ಸ್ಥಳಕ್ಕೆ ಬಂದು ಸಂವಾದದಲ್ಲಿ ಪಾಲ್ಗೊಳ್ಳಲು ನಾನು ಸಿದ್ಧನಿದ್ದೇನೆ  ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಅಧ್ಯಕ್ಷ ಜಾಮದಾರ್, ಸಾಣೇಹಳ್ಳಿ ಶ್ರೀ, ಶಾಸಕ ಎಂ.ಬಿ.ಪಾಟೀಲ್‌ ಅವರಿಗೆ  ಪೇಜಾವರ ಶ್ರೀಗಳು ಸವಾಲು ಹಾಕಿದರು.

ಹಿಂದೂ ಧರ್ಮ ಬಲಗೊಳಿಸುವುದು ಎಂದರೇ ದಲಿತ ವರ್ಗದವರನ್ನ ಮುಖ್ಯವಾಹಿನಿಗೆ ತರಬೇಕು. ಬೌದ್ಧ ಧರ್ಮ ಆಗಬಹುದು, ಜೈನ ಧರ್ಮ ಆಗಿರಬಹುದು ಅವರೆಲ್ಲರೂ ಹಿಂದೂಗಳೇ ಆಗಿರುತ್ತಾರೆ. ಕಾಲಾಂತರದಲ್ಲಿ ಈ ರೀತಿಯ ಪರಿಸ್ಥಿತಿಗಳು ಉದ್ಭವವಾಗುದೆ. ಈಗಾಗಿ ಎಲ್ಲಾರೂ ಒಟ್ಟಾಗಿ ಸೋದರರಂತೆ ಬಾಳುತ್ತ ಹಿಂದೂ ಧರ್ಮವನ್ನ ಬಲಗೋಳಿಸಬೇಕು ಎಂದು ಪೇಜಾವರ ಶ್ರೀಗಳು ಕರೆ ನೀಡಿದರು.

ಈ ಬಾರಿ ಮೋದಿ ಅವರನ್ನ ಭೇಟಿಯಾದಗ ಗಂಗಾನದಿ ಸ್ವಚ್ಚತೆ ಹಾಗೂ ರಾಮಮಂದಿರ ‌ನಿರ್ಮಾಣಕ್ಕೆ ಸೂಚಿಸಿದ್ದೆನೆ. ರಾಮಮಂದಿರ ನಿರ್ಮಾಣಕ್ಕೆ ಸೂಕ್ತ ಸಮಯ ಎಂದು ಆಗ್ರಹಿಸಿದರು.

ಶೈವರು, ವೈಷ್ಣವರು ಹಿಂದೂಗಳಲ್ಲದಿದ್ದರೆ ಯಾರು ಹಿಂದೂಗೂಳು…? ಎಂದು ಪ್ರಶ್ನಿಸಿದ ಪೇಜಾವರ ಶ್ರೀಗಳು, ಶಿವನೇ ಸರ್ವೋತ್ತಮ, ಶಿವನ ಪಂಚಾಕ್ಷರಿ ಮಂತ್ರವನ್ನು ಎಲ್ಲರೂ ಜಪಿಸುತ್ತಾರೆ.ಶಿವನನ್ನು ಒಪ್ಪಿದ ಮೇಲೆ ಹಿಂದೂಗಳಲ್ಲ ಎಂದು ಹೇಳಲು ಸಾಧ್ಯವೇ..? 1955ರಿಂದಲೂ ನಾನು ಎಲ್ಲಾ ಲಿಂಗಾಯತ,  ವೀರಶೈವ ಮಠಾಧೀಶರು ಸ್ನೇಹ ಸಂಪರ್ಕವನ್ನು ಹೊಂದಿದ್ದೇನೆ. ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ನಿಮಗೇನು ಅಧಿಕಾರವಿದೆ ಎಂದು ಜಾಮದಾರರನ್ನೊಳಗೊಂಡಂತೆ ಅನೇಕರು ಕೇಳಿದ್ದಾರೆ ಎಂದು ಕಿಡಿಕಾರಿದರು.

ಸಹೋದರನು ತಾನು ಉಳಿದ ಸಹೋದರರ ಜೊತೆಗೆ ಇರುವುದಿಲ್ಲ,  ಬೇರೆ ಮನೆ ಮಾಡುತ್ತೇನೆಂದು ಹೇಳಿದರೆ, ಉಳಿದವರು ಬೇರೆ ಮನೆಗೆ ಹೋಗುವುದು ಬೇಡ, ಜೊತೆಗೆ ಇರು ಎಂದು ಕೇಳಿಕೊಂಡರೆ ತಪ್ಪಾಗುತ್ತದೆಯೇ..? ಎಂದು ತಮ್ಮ ಟೀಕಾಕಾರರನ್ನು ಪೇಜಾವರ ಶ್ರೀಗಳು ಪ್ರಶ್ನಿಸಿದರು.

Key words: Lingayath- also- Hindus-ready -any discussion –pejavara shree-myosre