Thursday, August 13, 2026

BDA Apartments

Home Cinema ಮೈಸೂರು ಮೃಗಾಲಯದಲ್ಲಿ ಹುಲಿ ದತ್ತು ಪಡೆದ ದಚ್ಚು !

ಮೈಸೂರು ಮೃಗಾಲಯದಲ್ಲಿ ಹುಲಿ ದತ್ತು ಪಡೆದ ದಚ್ಚು !

ಬೆಂಗಳೂರು, ಜುಲೈ 30, 2019 (www.justkannada.in): ವಿಶ್ವ ವ್ಯಾಘ್ರ ದಿನದಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರು ಮೃಗಾಲಯದ ಒಂದು ಗಂಡು ಹುಲಿ, ಎರಡು ಅನಕೊಂಡ ಹಾಗೂ ಒಂದು ಆನೆಯನ್ನು 2.95 ಲಕ್ಷ ರೂಪಾಯಿ ಚೆಕ್ ನೀಡುವ ಮೂಲಕ ದತ್ತು ಪಡೆದುಕೊಂಡಿದ್ದಾರೆ.

ಪ್ರಾಣಿಪ್ರಿಯರಾಗಿರುವ ದರ್ಶನ್ ಈಗಾಗಲೇ ಹಲವು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರಲ್ಲದೆ, ಮೈಸೂರು ಸಮೀಪದ ತಮ್ಮ ಫಾರ್ಮ್ ಹೌಸ್ ನಲ್ಲಿ ಪುಟ್ಟದೊಂದು ಪ್ರಾಣಿ ಸಂಗ್ರಹಾಲಯವನ್ನು ಮಾಡಿಕೊಂಡು ಅವುಗಳನ್ನು ಪೋಷಿಸುತ್ತಿದ್ದಾರೆ.