Monday, October 5, 2026

BDA Apartments

ಬಿ.ಎಸ್.ವೈ ಮುಕ್ತ ಬಿಜೆಪಿ ಆಗುವ ಕಾಲವೂ ಸನ್ನಿಹಿತ : ರಾಜ್ಯ ಕಾಂಗ್ರೆಸ್ ಟೀಕೆ BDA J...
Home Cinema ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ಶಿವರಾಂ.

ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ಶಿವರಾಂ.

ಬೆಂಗಳೂರು,ಡಿಸೆಂಬರ್,5,2021(www.justkannada.in):   ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಕನ್ನಡ ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ಇಂದು ಪೊಲೀಸ್ ಗೌರವದೊಂದಿಗೆ ನೆರವೇರಿತು.

ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ನೆರವೇರಿತು. ಶಿವರಾಂ ಅವರ ಪುತ್ರರಾದ ರವಿಶಂಕರ್ ಲಕ್ಷ್ಮೀಶ್  ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸ್ಯಾಂಡಲ್​ವುಡ್​ಗೆ ಮಾರ್ಗದರ್ಶಕರಾಗಿದ್ದ ಶಿವರಾಂ ಅವರು, ಪಂಚಭೂತಗಳಲ್ಲಿ ಲೀನರಾದರು. ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ.

ಅಂತ್ಯ ಸಂಸ್ಕಾರಕ್ಕೂ ಮೊದಲು ಪಾರ್ಥಿವ ಶರೀರಕ್ಕೆ ಅಷ್ಟಾಭಿಷೇಕದ ಪೂಜೆ ಮಾಡಲಾಯಿತು. ತುಪ್ಪ, ಹೂವು, ಗಂಧ, ವಿಭೂತಿ, ಖರ್ಜೂರ, ಕೆಂಪು, ಕಲ್ಲು ಸಕ್ಕರೆ, ಹಾಲು, ಮೊಸರು , ಅವಲಕ್ಕಿಯಿಂದ ಪೂಜೆ ನಡೆಸಲಾಯಿತು. ನಂತರ ಶಿವರಾಂ ಅವರ ಪುತ್ರರಾದ ರವಿಶಂಕರ್ ಲಕ್ಷ್ಮೀಶ್  ಅಂತಿಮ ವಿಧಿವಿಧಾನ ನೆರವೇರಿಸಿದರು.

Key words: funeral – Kannada veteran- Sivaram – police -honors