Tuesday, August 18, 2026

BDA Apartments

Home Cinema ನಟಿ ಸಮಂತಾ ಬ್ಯಾಕ್-ಟು-ಬ್ಯಾಕ್ ಚಿತ್ರಗಳಿಗೆ ಸಹಿ: ಪುಷ್ಪಾ ಸಿನಿಮಾದ ಸ್ಪೆಷಲ್ ಸಾಂಗ್’ಗೆ ಹೆಜ್ಜೆ

ನಟಿ ಸಮಂತಾ ಬ್ಯಾಕ್-ಟು-ಬ್ಯಾಕ್ ಚಿತ್ರಗಳಿಗೆ ಸಹಿ: ಪುಷ್ಪಾ ಸಿನಿಮಾದ ಸ್ಪೆಷಲ್ ಸಾಂಗ್’ಗೆ ಹೆಜ್ಜೆ

ಬೆಂಗಳೂರು, ಡಿಸೆಂಬರ್ 01, 2021 (www.justkannada.in): ನಟಿ ಸಮಂತಾ ಬ್ಯಾಕ್-ಟು-ಬ್ಯಾಕ್ ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಜೊತೆಗೀಗ ತಮ್ಮ ಮೊದಲ ಐಟಂ ಹಾಡಿನ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಐಟಂ ಸಾಂಗ್​​ವೊಂದರಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಹೈರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ ಹಾಕಲಾಗಿದ್ದು, ಶೂಟಿಂಗ್‌ ನಡೆಯಲಿದೆ.

ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಹೊಂದಾಣಿಕೆ ಕೊರತೆ, ಕೆಲ ಭಿನ್ನಾಭಿಪ್ರಾಯಗಳು ಉಂಟಾಗಿದ್ದರಿಂದ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದರು.

ಐದು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಪೆಪ್ಪಿ ಹಾಡನ್ನು ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ್ದಾರೆ.