Monday, August 24, 2026

BDA Apartments

Home Cinema ಈ ಶುಕ್ರವಾರ (ನ.26) ಥಿಯೇಟರ್’ಗೆ ಬರಲಿದ್ದಾನೆ ‘ಗೋವಿಂದ ಗೋವಿಂದ’

ಈ ಶುಕ್ರವಾರ (ನ.26) ಥಿಯೇಟರ್’ಗೆ ಬರಲಿದ್ದಾನೆ ‘ಗೋವಿಂದ ಗೋವಿಂದ’

ಬೆಂಗಳೂರು, ನವೆಂಬರ್ 24, 2021 (www.justkannada.in): ಕಾಮಿಡಿ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಸುಮಂತ್ ಶೈಲೇಂದ್ರ ನಟನೆಯ ‘ಗೋವಿಂದ ಗೋವಿಂದ’ ಚಲನಚಿತ್ರ ನಾಡಿದ್ದು (ನ.26) ಬಿಡುಗಡೆಯಾಗಲಿದೆ.

ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ದಾವಣಗೆರೆಯಲ್ಲಿ ತ್ರಿಶೂಲ್‌ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ನಾಯಕಿಯಾಗಿ ಕವಿತಾ ಗೌಡ ಹಾಗೂ ಭಾವನಾ ಮೆನನ್ ನಟಿಸಿದ್ದಾರೆ. ಚಿತ್ರದ ಟೀಜರ್ ಕೂಡ ಸಾಕಷ್ಟು ಗಮನ ಸೆಳೆದಿದ್ದು, ಚಿತ್ರತಂಡ ಮತ್ತೊಂದು ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.

ಚಿತ್ರದಲ್ಲಿ ವಿಜಯ್‌ ಚೆಂಡೂರು ಹಾಗೂ ಪವನ್‌ಕುಮಾರ್, ರೂಪೇಶ್ ಶೆಟ್ಟಿ ಭೂಮಿಕೆಯಲ್ಲಿ ಇದ್ದಾರೆ. ‘ದೇವ್‌ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣವಿದೆ.