Tuesday, August 11, 2026

BDA Apartments

Home Front Page ಪಾದಯಾತ್ರೆ ಮಾಡಲಿ ಬಿಡಲಿ,ಮೇಕೆದಾಟು ಯೋಜನೆ ಮಾಡೇ ಮಾಡ್ತೇವೆ- ಸಚಿವ ಕೆ.ಎಸ್ ಈಶ್ವರಪ್ಪ.

ಪಾದಯಾತ್ರೆ ಮಾಡಲಿ ಬಿಡಲಿ,ಮೇಕೆದಾಟು ಯೋಜನೆ ಮಾಡೇ ಮಾಡ್ತೇವೆ- ಸಚಿವ ಕೆ.ಎಸ್ ಈಶ್ವರಪ್ಪ.

ಬೆಂಗಳೂರು,ನವೆಂಬರ್,8,2021(www.justkannada.in):  ಕಾಂಗ್ರೆಸ್ ನವರಿಗೆ ಈಗ ಮೇಕೆದಾಟು ಬಗ್ಗೆ ನೆನಪಾಗಿದೆ. ಅವರು ಪಾದಯಾತ್ರೆ ಮಾಡಲಿ ಬಿಡಲಿ ನಾವು ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ಅವರ ಸರ್ಕಾರ ಇದ್ದಾಗ ಮೇಕೆದಾಟು ಬಗ್ಗೆ ಯಾಕೆ ಮಾತನಾಡಲಿಲ್ಲ. ನಾವೇನು ಮೇಕಾದಾಟು ಯೋಜನೆ ಮಾಡಲ್ಲ ಅಂತಾ ಹೇಳಿಲ್ಲ. ಪಾದಯಾತ್ರೆ ಮಾಡಲಿ ಬಿಡಲಿ ನಾವಂತೂ ಯೋಜನೆ ಮಾಡೇ ಮಾಡುತ್ತೇವೆ ಎಂದರು.

ಬಿಟ್ ಕಾಯಿನ್ ದಂಧೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಟ್ ಕಾಯಿನ್ ದಂಧೆ ಬಗ್ಗೆ ನಾನು ಮಾತನಾಡುವುದಿಲ್ಲ. ದಂಧೆಯಲ್ಲಿ ಪ್ರಭಾವಿಗಳಿದ್ದಾರೆಂದು ಕಾಂಗ್ರೆಸ್ ಆರೋಪಿಸುತ್ತಿದೆ. ತನಿಖೆ ಬಳಿಕ ಯಾರಿದ್ಧಾರೆಂದು ಬಹಿರಂಗವಾಗಲಿದೆ. ದಂಧೆಯಲ್ಲಿ ಸಿಎಂ ಮಗನಿದ್ದಾರಾ..? ಸಚಿವರ ಮಗನಿದ್ದಾರಾ..? ಸಾರ್ವಜನಿಕವಾಗಿ ಚರ್ಚೆಯಾದರೇ ನಾನ್ಯಾಕೆ ಉತ್ತರ ನೀಡಲಿ ಎಂದರು.

Key words: mekedatu-planning-  Minister -KS Eshwarappa