Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Crime ಪಾರ್ಟಿ ವೇಳೆ ಇಬ್ಬರ ನಡುವೆ ಬಡಿದಾಟ: ಪಾಲಿಕೆ ಮಾಜಿ ಉಪಮೇಯರ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು.

ಪಾರ್ಟಿ ವೇಳೆ ಇಬ್ಬರ ನಡುವೆ ಬಡಿದಾಟ: ಪಾಲಿಕೆ ಮಾಜಿ ಉಪಮೇಯರ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು.

ಮೈಸೂರು,ಅಕ್ಟೋಬರ್,11,2021(www.justkannada.in): ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣಗೆ ಸೇರಿದ  ಮೈಸೂರು ಸೋಷಿಯಲ್ಸ್ ಕ್ಲಬ್ ಮತ್ತೆ ಸುದ್ದಿಯಾಗಿದ್ದು, ಇಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ರೌಡಿ ಶೀಟರ್‌ಗಳ ನಡುವೆ ಬಡಿದಾಟವಾಗಿ ಮೈಸೂರು ಪಾಲಿಕೆ ಮಾಜಿ ಮೇಯರ್ ವಿರುದ್ಧ ಪ್ರಕರಣ ದಾಖಲಾಗಿದೆ.

ನಗರ ಪಾಲಿಕೆ ಮಾಜಿ ಉಪ ಮೇಯರ್ ಅರ್ಜುನ್ ಹಾಗೂ ಇತರ ಮೂವರ  ವಿರುದ್ಧ ಕೊಲೆಯತ್ನದ ದೂರು  ದಾಖಲಾಗಿದೆ. ಹಲ್ಲೆ ಕೊಲೆಯತ್ನ ಆರೋಪ ಮಾಡಿ  ಸುಜಿತ್‌ ಕುಮಾರ್ ಕುಮಾರ್ ದೂರು ನೀಡಿದ್ದರು.

 ಆಗಿದ್ದೇನು..

ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ನಿನ್ನೆ ರಾಜಕೀಯ ಮುಖಂಡರು, ಸಿನಿಮಾ ನಟರು, ಗೆಳೆಯರಿಗೆ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಸುಜಿತ್‌ಕುಮಾರ್ @ ಲಾಡ್ಜ್‌ಕುಮಾರ್ ಹಾಗೂ ರವಿಕುಮಾರ್ @ರಾಜಕೀಯರವಿ ಸಹ ಪಾರ್ಟಿಗೆ ಆಗಮಿಸಿದ್ದರು.  ಗಂಭೀರ ಗಾಯ. ಸಂಜಿತ್ ಕುಮಾರ್ ಮತ್ತು ಅರ್ಜುನ್  ನಡುವೆ ಗಲಾಟೆ ನಡೆದಿದೆ. ಇಬ್ಬರು ಪರಸ್ಪರ ಮಧ್ಯದ ಬಾಟಲಿಯಲ್ಲಿ ಬಡಿದಾಡಿಕೊಂಡಿದ್ದು, ಅರ್ಜುನ್ ಹಾಗೂ ಇತರೆ ಮೂವರ ವಿರುದ್ಧ ಚಾಕುವಿನಿಂದ ಕೊಲೆ ಯತ್ನ ನಡೆಸಿರುವ ಆರೋಪ ಕೇಳಿ ಬಂದಿದೆ.

ಗಲಾಟೆಯಲ್ಲಿ ಸಂಜಿತ್‌ಕುಮಾರ್  ಲಾಡ್ಜ್‌ಕುಮಾರ್ ಹಾಗೂ ರವಿಕುಮಾರ್ ರಾಜಕೀಯರವಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸುಜಿತ್  ಕುಮಾರ್ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಜಿ ಉಪಮೇಯರ್ ಅರ್ಜುನ್ ಹಾಗೂ ಇತರ ಮೂವರ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಸೆಕ್ಷನ್‌ 307, 323, 504, 506, 34 ಅಡಿ ಎಫ್‌ಐಆರ್ ದಾಖಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 12.30 ರಾಕೇಶ್ ಪಾಪಣ್ಣ ಮನೆಗೆ ಭೇಟಿ ಕೊಟ್ಟಿದ್ದರು.

Key words: Roudi sheets- party-Murder case –against- former deputy mayor