ಕಾನೂನು ಪುಸ್ತಕದಲ್ಲಿದ್ದರೇ ಸಾಲದು, ಪರಿಣಾಮಕಾರಿಯಾಗಿ ಜಾರಿಯಾಗಬೇಕು- ಅತೃಪ್ತ ಶಾಸಕರ ವಿರುದ್ದ ಸ್ಪೀಕರ್ ರಮೇಶ್ ಕುಮಾರ್ ಪರೋಕ್ಷ ಕಿಡಿ…

ಬೆಂಗಳೂರು,ಜು,24,2019(www.justkannada.in):  ಕಾನೂನು ಪುಸ್ತಕದಲ್ಲಿದ್ದರೇ ಸಾಲದು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ನಿನ್ನೆ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಿದ್ದು ಹೆಚ್.ಡಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಡುವೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಅತೃಪ್ತ ಶಾಸಕರ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ ಸ್ಪೀಕರ್ ರಮೇಶ್ ಕುಮಾರ್,  ಎಲ್ಲವೂ ಮುಗಿದಿದೆ. ಅತೃಪ್ತರು ತೃಪ್ತರಾಗಿದ್ದಾರೆ. ಕಾನೂನು ಪುಸ್ತಕದಲ್ಲಿದ್ದರೇ ಸಾಲದು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಮುಂದೆ ಎಲ್ಲವೂ ಕಾನೂನಿನ ಪ್ರಕಾರ ನಡೆಯುತ್ತದೆ.  ರಾಜೀನಾಮೆ ನೀಡಿದ ಸಚಿವರ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಾರೆ ಎಂದರು.

ಹಾಗೆಯೇ ವಿಶ್ವಾಸಮತಯಾಚನೆ ವೇಳೆ ಹಾಜರಾಗದ ಹಿನ್ನೆಲೆ ಶ್ರೀಮಂತ್ ಪಾಟೀಲ್ ವಿರುದ್ದ ಕಾಂಗ್ರೆಸ್ ದೂರು ನೀಡಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಶ್ರೀಮಂತ್ ಪಾಟೀಲ್ ಗೆ ನೋಟೀಸ್ ನೀಡಿದ್ದೇನೆ. ಇನ್ನು ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ. ಮುಂದಿನ ನಡಾವಳಿಗಳನ್ನ ರಾಜ್ಯಪಾಲರು ನೋಡಿಕೊಳ್ಳುತ್ತಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

Key words:  Speaker -Ramesh Kumar -indirectly –sparked-against –rebel-MLAs