Saturday, September 19, 2026

BDA Apartments

ಕರ್ತವ್ಯಕ್ಕೆ ಅಡ್ಡಿಪಸಿದ ಹಿನ್ನೆಲೆ ಚಾಮುಂಡಿ ಬೆಟ್ಟದ ಪಿ.ಡಿ.ಓ ರವರಿಂದ ಕ್ರಿ...
Home Crime ಕರ್ತವ್ಯಕ್ಕೆ ಅಡ್ಡಿಪಸಿದ ಹಿನ್ನೆಲೆ ಚಾಮುಂಡಿ ಬೆಟ್ಟದ ಪಿ.ಡಿ.ಓ ರವರಿಂದ ಕ್ರಿಮಿನಲ್ ಮೊಕದ್ದಮೆ ದಾಖಲು.

ಕರ್ತವ್ಯಕ್ಕೆ ಅಡ್ಡಿಪಸಿದ ಹಿನ್ನೆಲೆ ಚಾಮುಂಡಿ ಬೆಟ್ಟದ ಪಿ.ಡಿ.ಓ ರವರಿಂದ ಕ್ರಿಮಿನಲ್ ಮೊಕದ್ದಮೆ ದಾಖಲು.

ಮೈಸೂರು,ಅಕ್ಟೋಬರ್,3,2021(www.justkannada.in): ಕರ್ತವ್ಯಕ್ಕೆ ಅಡ್ಡಿಪಸಿದ ಹಿನ್ನೆಲೆ,  ಚಾಮುಂಡಿ ಬೆಟ್ಟದ ಪಿ.ಡಿ.ಓ ರವರಿಂದ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಹಾಗೂ ಅವರ ಪತಿ ಸೇರಿ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿಪಸಿದ ಆರೋಪದ ಮೇಲೆ ಕೆ.ಆರ್ ಪೊಲೀಸ್ ಠಾಣೆಗೆ ದೂರು ನೀಡಿರುವ ಚಾಮುಂಡಿ ಬೆಟ್ಟದ ಪಿ.ಡಿ.ಓ  ಪೂರ್ಣಿಮಾ ಅವರು, ದಿನಾಂಕ 6 ರಂದು ತಾವರೆಕಟ್ಟೆ ಗ್ರಾಮಸ್ಥರು ದೂರವಾಣಿ ಕರೆ ಮಾಡಿ ರಾಮರಾಜು ಎಂಬುವವರು ಅನಧಿಕೃತವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಗಳ ಜತೆ ಭೇಟಿ ನೀಡಿದ್ಧ ವೇಳೆ ತಾವರೆಕಟ್ಟೆ ಗ್ರಾಮದ ಉಪಾಧ್ಯಕ್ಷರಾದ ತುಳಸಿ ಹಾಗೂ ಅವರ ಪತಿ ಪುಟ್ಟರಾಜು,  ನಿವೇಶನ ಮಾಲೀಕರಾದ ರಾಮರಾಜ ಅವರ ಮಗ ನಂದೀಶ್ ಹಾಗೂ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆ ಹೊತ್ತಿರುವ ಒಬ್ಬರು ಸ್ಥಳದಲ್ಲಿದ್ದು ಇವರಿಗೆ ನೊಟೀಸ್ ನೀಡಿದರೂ ಅದನ್ನ ತೆಗೆದುಕೊಳ್ಳದೆ  ಇದು ಸ.ನಂ 4ಕ್ಕೆ ಸೇರಿರುವ ಜಾಗವಾಗಿದೆ. ನಿಮಗೆ ತಾವರೆಕಟ್ಟೆಗೆ ಬರುವ ಹಾಗೂ ಕೆಲಸ ನಿಲ್ಲಿಸುವ  ಅಧಿಕಾರ ಇಲ್ಲ ಎಂದು ಧಮ್ಕಿ ಹಾಕಿದ್ದಾರೆ.

ಅಲ್ಲದೆ ಬೇಕಂತಲೇ ತೊಂದರೆ ಕೊಡುತ್ತೀರಿ  ನಾವು ಏನೇ ಆದರೂ ಕೆಲಸ ನಿಲ್ಲಿಸುವುದಿಲ್ಲ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೆ ಗ್ರಾ.ಪಂ ಉಪಾಧ್ಯಕ್ಷರ ಪತಿ ಪುಟ್ಟರಾಜು  ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ಅವರ ಪತಿ  ಎಂದು ಹೇಳಿ ತೊಂದರೆ ನೀಡುತ್ತಿದ್ದು ಹೆಂಡತಿಯ ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಾವರೆಕಟ್ಟೆಗೆ ಸೇರಿದ ಅನೇಕ ವಿಷಯಗಳಲ್ಲಿ  ಅನವಶ್ಯಕ ವಿಷಯಗಳಲ್ಲಿ ಮೂಗು ತೋರಿಸಿ ನನ್ನ ಮೇಲೆ ಮೇಲಾಧಿಕಾರಿಗಳಿಗೆ ದೂರು ಬರೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಹೀಗಾಗಿ ರಾಮರಾಜು, ಪುಟ್ಟರಾಜು, ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಹಾಗೂ ನಂದೀಶ್  ಇವರುಗಳ ವಿರುದ್ಧ ಕಾನೂನು ರೀತಿ  ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಜೀವ ಬೆದರಿಕೆ ಹಾಕಿರುವ ಸಂಬಂಧ ದೂರು ದಾಖಲಿಸಬೇಕು ಎಂದು ಮನವಿ ಮಾಡಿದ್ದರು. ಈ ಸಂಬಂಧ ಇದೀಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

Key words:   PDO – Chamundi hill- Filing – criminal case