Saturday, August 8, 2026

BDA Apartments

Home Front Page ಸಿನಿ ಮಂದಿಗೆ ಖುಷಿ ಸುದ್ದಿ! ಇಂದು ಥಿಯೇಟರ್’ಗಳ ಮೇಲಿನ ನಿರ್ಬಂಧ ತೆರವು ಆದೇಶ ಸಾಧ್ಯತೆ

ಸಿನಿ ಮಂದಿಗೆ ಖುಷಿ ಸುದ್ದಿ! ಇಂದು ಥಿಯೇಟರ್’ಗಳ ಮೇಲಿನ ನಿರ್ಬಂಧ ತೆರವು ಆದೇಶ ಸಾಧ್ಯತೆ

ಬೆಂಗಳೂರು, ಸೆಪ್ಟೆಂಬರ್ 21, 2021 (www.justkannada.in): ಸಿನಿಮಾ ಥಿಯೇಟರ್ ಗಳ ಮೇಲೆ ಹೇರಲಾಗಿದ್ದ ನಿರ್ಬಂಧ ತೆರವುಗೊಳಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂಬ ಮೂಲಗಳು ತಿಳಿಸಿವೆ. ಕೋವಿಡ್ ಕಾರಣದಿಂದಾಗಿ ಥಿಯೇಟರ್ ಗಳಿಗೆ ನಿರ್ಬಂಧ ಹೇರಿದ್ದು, ಶೇಕಡ 50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಕೊರೋನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ವಿಧಿಸಿದ್ದ ಶೇಕಡ 50 ರಷ್ಟು ಪ್ರೇಕ್ಷಕರೊಂದಿಗೆ ವೀಕ್ಷಣೆಗೆ ನಿರ್ಬಂಧ ತೆರವು ಮಾಡಲು ಬಿಬಿಎಂಪಿ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ಸರ್ಕಾರ, ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಸಿನಿಮಾ ಥಿಯೇಟರ್ ಗಳ ಜೊತೆಗೆ ಪಬ್ ಗಳಿಗೂ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

key words: restriction on theaters may remove today