Wednesday, August 12, 2026

BDA Apartments

Home Front Page ಬಿಎಸ್ ವೈ ರಾಜ್ಯ ಪ್ರವಾಸಕ್ಕೆ ಯಾರ ಒಪ್ಪಿಗೆಯೂ ಅಗತ್ಯವಿಲ್ಲ- ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬಿಎಸ್ ವೈ ರಾಜ್ಯ ಪ್ರವಾಸಕ್ಕೆ ಯಾರ ಒಪ್ಪಿಗೆಯೂ ಅಗತ್ಯವಿಲ್ಲ- ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ದಾವಣಗೆರೆ, ಸೆಪ್ಟಂಬರ್,18,2021(www.justkannada.in):  ಯಡಿಯೂರಪ್ಪ ಪಕ್ಷದಲ್ಲಿ ಅಗ್ರಗಣ್ಯ ನಾಯಕರು. ಹೀಗಾಗಿ  ರಾಜ್ಯ ಪ್ರವಾಸ ಆರಂಭಿಸಲು ಅವರಿಗೆ ಗ್ರೀನ್ ಸಿಗ್ನಲ್ ನೀಡುವ  ಅವಶ್ಯಕತೆ ಇಲ್ಲ.  ಯಾರ ಒಪ್ಪಿಗೆ ಇಲ್ಲದೆ ಅವರು ರಾಜ್ಯಪ್ರವಾಸ ಮಾಡಬಹುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅರುಣ್ ಸಿಂಗ್, ಯಡಿಯೂರಪ್ಪ ಹಿರಿಯ ನಾಯಕ ಅವರು ರಾಜ್ಯ ಪ್ರವಾಸ ಮಾಡಬಹುದು. ಯಾರ ಒಪ್ಪಿಗೆ ಅಗತ್ಯವಿಲ್ಲ. ಅದಕ್ಕೆ ಗ್ರೀನ್ ಸಿಗ್ನಲ್ ನೀಡುವ ಅವಶ್ಯಕತೆ ಇಲ್ಲ. ಅವರ ರಾಜ್ಯಪ್ರವಾಸದಿಂದ ಬಿಜೆಪಿಗೆ ಲಾಭ ಎಂದರು.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಸಮಾಜದ ಎಲ್ಲ ಜನಾಂಗದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಜನರಿಗೆ ಅನುಕೂಲ ಆಗುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ರಕ್ಷಣೆ ಬಗ್ಗೆ ಕಾಂಗ್ರೆಸ್ ಈಗ ಮಾತು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅರುಣ್ ಸಿಂಗ್, ದೇಗುಲಗಳ ರಕ್ಷಣೆ ಬಗ್ಗೆ ಕಾಂಗ್ರೆಸ್ ಈಗ ಮಾತನಾಡುತ್ತಿದೆ. ಮಸೀದಿ ನಿರ್ಮಾಣದ ಬಗ್ಗೆ ಸಿದ್ಧರಾಮಯ್ಯ ಮಾತನಾಡುತ್ತಿದ್ದರು. ಈಗ ದೇಗುಲಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Key words: No consent – required –BS yeddyurappa- state tour-bjp-in charge -Arun Singh