Friday, September 18, 2026

BDA Apartments

ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ- ಮಾಜಿ ಸಚಿವ ಹೆಚ್.ಡಿ ರೇವಣ್ಣ BDA JK_Adv ...
Home Front Page ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ- ಮಾಜಿ ಸಚಿವ ಹೆಚ್.ಡಿ ರೇವಣ್ಣ.

ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ- ಮಾಜಿ ಸಚಿವ ಹೆಚ್.ಡಿ ರೇವಣ್ಣ.

ಬೆಂಗಳೂರು, ಸೆಪ್ಟಂಬರ್,14,2021(www.justkannada.in):  ಜೆಡಿಎಸ್ ಪಕ್ಷ ಹಡಗಲ್ಲ, ಸಬ್‍ಮೆರಿನ್. ಯಾವಾಗ ಬೇಕಾದರೂ ಮೇಲಕ್ಕೆ ಏಳುತ್ತದೆ. ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ,  ಕಲಬುರಗಿ ಮಹಾನಗರ ಪಾಲಿಕೆಯ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರೊಂದಿಗೆ ಮಾತನಾಡಿದ್ದಾರೆ. ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದರು.

ನಂಜನಗೂಡು ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸಬಾರದು ಎಂದಲ್ಲ, ದೇಗುಲ ಕೆಡಹುವುದು ಮುಖ್ಯವಲ್ಲ, ಅಭಿವೃದ್ಧಿ ಮುಖ್ಯ.ಬಿಜೆಪಿಯವರು ಬೆಳಗಾದರೆ ಹಿಂದೂ ಧರ್ಮ ಎನ್ನುತ್ತಾರೆ. ಅವರು ಧರ್ಮ ನೋಡಿಕೊಳ್ಳುವುದು ಇದೇನಾ ಎಂದು ಹೆಚ್.ಡಿ ರೇವಣ್ಣ ಟೀಕಿಸಿದರು.

Key words: Nobody- can- finish –JDS-Former Minister -HD Revanna.