Saturday, August 8, 2026

BDA Apartments

Home Cinema ಕೆಲ ಪೈರಸಿ ವೆಬ್’ಸೈಟ್ ಗಳಲ್ಲಿ ‘ತಲೈವಿ’ ಲೀಕ್! ನಿರ್ಮಾಪಕರಿಗೆ ತಲೆನೋವು ತಂದ ಆನ್’ಲೈನ್ ಖದೀಮರು

ಕೆಲ ಪೈರಸಿ ವೆಬ್’ಸೈಟ್ ಗಳಲ್ಲಿ ‘ತಲೈವಿ’ ಲೀಕ್! ನಿರ್ಮಾಪಕರಿಗೆ ತಲೆನೋವು ತಂದ ಆನ್’ಲೈನ್ ಖದೀಮರು

ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಕುರಿತಾದ ಚಿತ್ರ ತಲೈವಿ ಕೊನೆಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ನಟಿ ಕಂಗನಾ ರನೌತ್ ಅಭಿನಯದ ತಲೈವಿ ಚಿತ್ರದ ಕೆಲ ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿವೆ.

ತಮಿಳ್ರೊಕರ್ಜ್, ಮೊವಿರುಲ್ಜ್, ಟೆಲಿಗ್ರಾಂ ನಂತಹ ವಿವಿಧ ಪೈರಸಿ ವೆಬ್‌ಸೈಟ್‌ಗಳಲ್ಲಿ ಈ ಚಲನಚಿತ್ರವು ಉಚಿತ ಸ್ಟ್ರೀಮಿಂಗ್‌ಗೆ ಲಭ್ಯವಿದೆ ಎನ್ನಲಾಗಿದೆ.

ಬ್ಲಾಕ್‌ಬಸ್ಟರ್‌ಗಳು ಬಿಡುಗಡೆಯಾದ ಕೆಲವು ಗಂಟೆಗಳ ನಂತರ ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತಿವೆ. ಇದು ನಿರ್ಮಾಪಕರ ತಲೆನೋವಿಗೆ ಕಾರಣವಾಗಿದೆ. ಅಂದಹಾಗೆ ‘ತಲೈವಿ’ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿಯೂ ಬಿಡುಗಡೆಯಾಗಿದೆ.

key words: ‘Thalaivi’ leak on some piracy websites!