Tuesday, August 4, 2026

BDA Apartments

Home Front Page ತೈಲಬೆಲೆ, ಆಹಾರ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ‘ರಾಜಭವನ ಚಲೋ’: ಪೊಲೀಸರಿಂದ ತಡೆ....

ತೈಲಬೆಲೆ, ಆಹಾರ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ‘ರಾಜಭವನ ಚಲೋ’: ಪೊಲೀಸರಿಂದ ತಡೆ.  

ಬೆಂಗಳೂರು,ಸೆಪ್ಟಂಬರ್,8,2021(www.justkannada.in): ದೇಶದಲ್ಲಿ ಪೆಟ್ರೋಲ್ ,ಡೀಸೆಲ್ ಮತ್ತು ಅಡುಗೆ ಆನಿಲ ,ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೌರ್ಯ ವೃತ್ತ ಗಾಂಧಿ ಪ್ರತಿಮೆಯಿಂದ  ರಾಜಭವನ ಚಲೋ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜಭವನಕ್ಕೆ ತೆರಳಲು ಹೋರಾಟ ಕಾಂಗ್ರೆಸ್ ಕಾರ್ಯಕರ್ತರನ್ನ ಪೋಲೀಸರು ಬಂಧಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕಳೆದ ಏಳು ವರ್ಷಗಳ ಬಿಜೆಪಿ ಪಕ್ಷದ ಆಡಳಿತದಲ್ಲಿ ಆಚ್ಚೇದೀನ್ ಬಂದಿಲ್ಲ ಬುರೇ (ಕೆಟ್ಟ)ದಿನಗಳು ಬಂದಿದೆ. ಪೆಟ್ರೋಲ್ ಬೆಲ್ 105 ರೂಪಾಯಿ, ಡೀಸಲ್ ಬೆಲೆ 96 ರೂಪಾಯಿ ಮತ್ತು ಅಡುಗೆ ಆನಿಲ ಬೆಲೆ 900 ರೂಪಾಯಿ, ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಬಡವರು ,ಮಧ್ಯಮ ವರ್ಗದ ಕುಟುಂಬ ನಿರ್ವಹಣೆ ಮಾಡಲು ಆಸಾಧ್ಯವಾಗಿದೆ ಎಂದು ಕಿಡಿಕಾರಿದರು.

ವಿದೇಶ ಕಪ್ಪು ಹಣ ಬಂದಿಲ್ಲ ,ವರ್ಷಕ್ಕೆ ಯುವಕರಿಗೆ 2ಕೋಟಿ ಉದ್ಯೋಗ ಸಿಕ್ಕಿಲ್ಲ. ಬಿಜೆಪಿಗೆ ಸುಳ್ಳು ಹೇಳುವುದು ಕಾಯಕವಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಆಡಳಿತ ಜನ ವಿರೋಧಿ ಆಡಳಿತವಾಗಿದೆ ಎಂದು  ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಶಾಸಕಿ ಸೌಮ್ಯರೆಡ್ಡಿ ಮತ್ತು ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ,ನಾರಾಯಣಸ್ವಾಮಿ ಮತ್ತು ಕೆ.ಪಿ.ಸಿ.ಸಿ.ಮಹಿಳಾ ಅಧ್ಯಕ್ಷರಾದ ಪುಷ್ಪ ಅಮರ್ ನಾಥ್ ಮತ್ತು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರುಗಳಾದ ರಾಜ್ ಕುಮಾರ್ ,ಶೇಖರ್ ,ಕೃಷ್ಣಪ್ಪ ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ ,ಜೆ.ಹುಚ್ಚಪ್ಪ ,ಮಂಜುನಾಥರೆಡ್ಡಿ ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರುಗಳಾದ ಉದಯಶಂಕರ್ , ಎಮ್.ಶಿವರಾಜು ಮತ್ತು  ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವಿಮಲ ವೆಂಕಟ್ ಹಾಗೂ ಮಾಜಿ ಪಾಲಿಕೆ ಸದಸ್ಯರು ,ಮಹಿಳಾ ಕಾಂಗ್ರೆಸ್ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Key words: Congress -condemn –hike-oil prices – food prices-protest