Saturday, September 12, 2026

BDA Apartments

ಐಸಿಸಿ ಟಿ-20 ವಿಶ್ವಕಪ್​ಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಂ ಇಂಡಿಯಾ ಪ್ರಕಟ BDA...
Home Front Page ಐಸಿಸಿ ಟಿ-20 ವಿಶ್ವಕಪ್​ಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಂ ಇಂಡಿಯಾ ಪ್ರಕಟ

ಐಸಿಸಿ ಟಿ-20 ವಿಶ್ವಕಪ್​ಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಂ ಇಂಡಿಯಾ ಪ್ರಕಟ

ಬೆಂಗಳೂರು, ಆಗಸ್ಟ್ 19, 2021 (www.justkannada.in): ಬಿಸಿಸಿಐ ಆಯ್ಕೆ ಸಮಿತಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಐಸಿಸಿ ಟಿ-20 ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಐಸಿಸಿ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್‌ 24 ರಂದು ಪಾಕಿಸ್ತಾನ ವಿರುದ್ಧದ ಸೆಣೆಸಾಟದ ಮೂಲಕ ಚುಟುಕು ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿದೆ.

ಚೇತನ್ ಶರ್ಮಾ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಐಸಿಸಿ ಟಿ-20 ವಿಶ್ವಕಪ್​ಗೆ ಭಾರತದ 15 ಮಂದಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಈಗಾಗಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್​ನಂತಹ ಪ್ರಮುಖ ತಂಡಗಳು ಅದಾಗಲೇ ಟಿ-20 ವಿಶ್ವಕಪ್​ಗೆ 15 ಸದಸ್ಯರ ತಂಡವನ್ನು ಪ್ರಕಟ ಮಾಡಿದೆ.