Saturday, September 12, 2026

BDA Apartments

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ರೆ ನನಗೆ ಬೇಡ- ಶಾಸಕ ಶ್ರೀಮಂತ ಪಾಟೀಲ್ BDA JK_...
Home Front Page ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ರೆ ನನಗೆ ಬೇಡ- ಶಾಸಕ ಶ್ರೀಮಂತ ಪಾಟೀಲ್.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ರೆ ನನಗೆ ಬೇಡ- ಶಾಸಕ ಶ್ರೀಮಂತ ಪಾಟೀಲ್.

ಬೆಂಗಳೂರು,ಆಗಸ್ಟ್,17,2021(www.justkannada.in):  ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೇ ಅದು ನನಗೆ ಬೇಡ ಎಂದು ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಶ್ರೀಮಂತ ಪಾಟೀಲ್ , ಮರಾಠ ಸಮುದಾಯಕ್ಕೆ ಸಚಿವ ಸ್ಥಾನ ಸಿಗದ ವಿಚಾರ.  ಸಾಕಷ್ಟು ಸಮಯವಿದೆ. ಮರಾಠ ಸಮುದಾಯದವರು ಬೇಸರ ಮಾಡಿಕೊಳ್ಳಬೇಡಿ. 4 ದಿನಗಳಲ್ಲಿ ನಿರ್ಧಾರವಾಗುತ್ತದೆ.  ನನಗೆ ಹೊಸ ಜವಾಬ್ದಾರಿ ಕೊಡುವುದಾಗಿ ಸಿಎಂ ಹೇಳಿದ್ದಾರೆ. ನನಗೆ ಬೇರೆ ಜವಾಬ್ದಾರಿ  ನೀಡಲಿದ್ದಾರೆ ಎಂದರು.

ತಾವು ನಿರೀಕ್ಷಿಸಿದ ಖಾತೆ ಸಿಗದಿದ್ದಕ್ಕೆ ಸಚಿವ ಆನಂದ್ ಸಿಂಗ್ ಬಹಿರಂಗ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀಮಂತ ಪಾಟೀಲ್, ಖಾತೆಯಲ್ಲಿ ದೊಡ್ಡದು ಚಿಕ್ಕದು ಅಂತಾ ಇಲ್ಲ.  ಕೊಟ್ಟ ಖಾತೆಯನ್ನ ನಿಭಾಯಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

Key words: not want -corporation board –chairman-position-MLA- Shrimantha patil Patil.