Sunday, September 27, 2026

BDA Apartments

ಇನ್ನರ್ ವೀಲ್ ಕ್ಲಬ್ ಮೈಸೂರ್ ಸೌತ್ ಈಸ್ಟ್ ಗೆ 10 ಪ್ರಶಸ್ತಿಗಳ ಗರಿ BDA JK_Adv BDA Adv
Home Front Page ಇನ್ನರ್ ವೀಲ್ ಕ್ಲಬ್ ಮೈಸೂರ್ ಸೌತ್ ಈಸ್ಟ್ ಗೆ 10 ಪ್ರಶಸ್ತಿಗಳ ಗರಿ.

ಇನ್ನರ್ ವೀಲ್ ಕ್ಲಬ್ ಮೈಸೂರ್ ಸೌತ್ ಈಸ್ಟ್ ಗೆ 10 ಪ್ರಶಸ್ತಿಗಳ ಗರಿ.

ಮೈಸೂರು,ಆಗಸ್ಟ್,16,2021(www.justkannada.in): ಇನ್ನರ್ ವೀಲ್ ಕ್ಲಬ್ ಜಿಲ್ಲೆ 318 , 2020-21 ರ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ “ಗರಿ” ನಿನ್ನೆ ವರ್ಚುವಲ್ ವೇದಿಕೆಯಲ್ಲಿ ನಡೆಯಿತು.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ,  ಇನ್ನರ್ ವೀಲ್ ಮೈಸೂರ್ ಸೌತ್ ಈಸ್ಟ್ ಹತ್ತು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಜೊತೆಗೆ ವರ್ಷದ ಸಮಗ್ರ ಕಾರ್ಯಚಟುವಟಿಕೆಗೆ ಇರುವ ಪ್ರಶಸ್ತಿಯಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿತು.

ಜಿಲ್ಲೆ 318 ರ ಜಿಲ್ಲಾಧ್ಯಕ್ಷೆ ಪುಷ್ಪಾ ಗುರುರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, 2020-21 ರ ಜಿಲ್ಲಾಧ್ಯಕ್ಷೆಯಾಗಿದ್ದ ವಾರಿಜಾ ಜಗದೀಶ್ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆಯಿತ್ತರು.

ಹಾಗೆಯೇ ಈ ಸಮಯದಲ್ಲಿ  45 ಕ್ಲಬ್ ಗಳ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನೂ ಮುಕ್ತ ಕಂಠದಿಂದ ಹೊಗಳಿದ ಅವರು,ಒಂದು ವರ್ಷದ ಈ ಅವಧಿಯಲ್ಲಿ ಮಹಾಮಾರಿಯ ಸಂದರ್ಭದಲ್ಲೂ  ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ ಎಂದರು.

ಪ್ರಶಸ್ತಿ ಸಮಿತಿಯ ಅಧ್ಯಕ್ಷೆಯಾದ ಮಾಜಿ ಜಿಲ್ಲಾ ಅಧ್ಯಕ್ಷೆ ಚಿತ್ರ ವಿ ರಾವ್, ಸಮಿತಿಯ ಸದಸ್ಯೆ, ಪಿಡಿಸಿ ವಿನೀತ ಸತೀಶ್, ಪಿಡಿಸಿ ರಾಜೇಶ್ವರಿ ಗೌಡ ಇವರನ್ನು ಒಳಗೊಂಡ ಸಮಿತಿ ಪ್ರಶಸ್ತಿಗಳ ಆಯ್ಕೆಯನ್ನು ಕೈಗೊಂಡಿತ್ತು. ಹಾಗೆಯೇ ಚಿತ್ರಾ ವಿ ರಾವ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಭೆಯಲ್ಲಿ 2020-21 ರ ಸಾಲಿನ ಅಸೋಸಿಯೇಷನ್ ಅಧ್ಯಕ್ಷೆ ವಸುಧಾ ಚಂದ್ರಚೂಡ್ ಹಾಗೂ ಸಂಧ್ಯಾ ಭಟ್ ಇವರೂ ಉಪಸ್ಥಿತರಿದ್ದರು.

Key words: Inner Wheel Club -Mysore South East – 10 awards.