Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರ: ಸರ್ಕಾರದಿಂದ ಉಚಿತ ಊಟ ಸ್ವೀಕರಿಸುವವರೇ ನಿರ್ಧರಿಸಲಿ ಎಂದ ಸಚಿವ...

ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರ: ಸರ್ಕಾರದಿಂದ ಉಚಿತ ಊಟ ಸ್ವೀಕರಿಸುವವರೇ ನಿರ್ಧರಿಸಲಿ ಎಂದ ಸಚಿವ ಸುನೀಲ್ ಕುಮಾರ್.

ಬೆಂಗಳೂರು,ಆಗಸ್ಟ್,13,2021(www.justkannada.in): ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರ ಸಂಬಂಧ ಈ ಬಗ್ಗೆ ಸರ್ಕಾರದಿಂದ ಉಚಿತ ಊಟ ಸ್ವೀಕರಿಸುವವರೇ ನಿರ್ಧರಿಸಲಿ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮನವಿ ಕುರಿತು ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಸುನೀಲ್ ಕುಮಾರ್, ಇಂದಿರಾ ಕ್ಯಾಂಟಿನ್ ಅಥವಾ ಅನ್ನಪೂರ್ಣೇಶ್ವರಿ ಯಾರ ಹೆಸರು ಇಡಬೇಕು ಎಂಬುದನ್ನ ಉಚಿತ ಊಟ ಸ್ವೀಕರಿಸುವವರೇ ನಿರ್ಧರಿಸಲಿ. ಅವರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನಿಸಲಿ ಎಂದು ಸಲಹೆ ನೀಡಿದರು.

ಬಿಜೆಪಿಗೆ ಸಂಸ್ಕೃತಿ ಗೊತ್ತಿಲ್ಲ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಸಚಿವ ಸುನೀಲ್ ಕುಮಾರ್, ನಮಗೆ ನಿಮ್ಮಿಂದ ಸಂಸ್ಕೃತಿ ಬಗ್ಗೆ ಅಗತ್ಯವಿಲ್ಲ. ಕಾಂಗ್ರೆಸ್ ಸಂಸ್ಕೃತಿ ಏನೇಂಬುದು ಎಲ್ಲರಿಗೂ ಗೊತ್ತು ಎಂದು ಟಾಂಗ್ ನೀಡಿದರು.

Key words: Indira Canteen- Name- Change- Issue- Minister -Sunil Kumar