ಮತ್ತೆ ಗಡಿಖ್ಯಾತೆ ತೆಗೆದ ಮಹಾರಾಷ್ಟ್ರ:  ಪ್ರಧಾನಿ ಮೋದಿಗೆ ಅಜಿತ್ ಪವಾರ್ ಪತ್ರ.

ಮುಂಬೈ,ಆಗಸ್ಟ್,12,2021(www.justkannada.in):  ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತೆ ಖ್ಯಾತೆ ತೆಗೆದಿದೆ. ಹೌದು, ಗಡಿ ವಿವಾದ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪತ್ರ ಬರೆದಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಡಿಸಿಎಂ ಅಜಿತ್ ಪವಾರ್,  ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥ ಮಾಡಲು ಮಧ್ಯಪ್ರವೇಶಿಸಬೇಕು. ಗಡಿ ವಿವಾದ ಇತ್ಯರ್ಥಪಡಿಸಬೇಕು.  ಮಹಾರಾಷ್ಟ್ರ ರಚನೆಯಾಗಿ 65ಕ್ಕೂ ಹೆಚ್ಚು ವರ್ಷ ಕಳೆದಿದೆ. ಕರ್ನಾಟಕದ ಮರಾಠಿ ಭಾಷಿಕರ ಪ್ರದೇಶಗಳು ಇನ್ನೂ ಸೇರಿಲ್ಲ. ಸಂಯುಕ್ತ ಮಹಾರಾಷ್ಟ್ರ ರಚನೆ ಕನಸು ಇನ್ನೂ ಈಡೇರಿಲ್ಲ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿ ಮರಾಠಿ ಭಾಷಿಕರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದ್ದಾರೆ.

ಸಂಯುಕ್ತ ಮಹಾರಾಷ್ಟ್ರ ಕನಸು ಇನ್ನು ಈಡೇರಿಲ್ಲ. ಸಂಯುಕ್ತ ಮಹಾರಾಷ್ಟ್ರ ರಚನೆ ಆಗುವವರೆಗೆ ನಾವು ವಿರಮಿಸಲ್ಲ. ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಿ. ಸುಪ್ರೀಂ ಕೋರ್ಟ್‌ನಲ್ಲೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ತಾವೂ ಸಹ ಮಧ್ಯ ಪ್ರವೇಶಿಸಬೇಕೆಂದು ಪ್ರಧಾನ ಮಂತ್ರಿ ನರೇಂದರ ಮೋದಿಗೆ ಡಿಸಿಎಂ ಅಜಿತ್ ಪವಾರ್ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

Key words: Maharashtra -again –border-DCM- Ajit Pawar’-letter – PM Modi