Sunday, September 20, 2026

BDA Apartments

ಖಾತೆ ಬಗ್ಗೆ ಸಚಿವರ ಅಸಮಾಧಾನ : ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತೆ B...
Home Front Page ಖಾತೆ ಬಗ್ಗೆ ಸಚಿವರ ಅಸಮಾಧಾನ : ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತೆ.

ಖಾತೆ ಬಗ್ಗೆ ಸಚಿವರ ಅಸಮಾಧಾನ : ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತೆ.

ಬೆಂಗಳೂರು,ಆಗಸ್ಟ್,8,2021(www.justkannada.in): ಖಾತೆ ಹಂಚಿಕೆಯ ನಂತರ ಸಚಿವ ಎಂಟಿಬಿ ನಾಗರಾಜ್ ಮತ್ತು ಆನಂದ್ ಸಿಂಗ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು ಇಂದು ಸಿಎಂ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.

ಇನ್ನು ಸಚಿವರ ಅಸಮಾಧಾನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸರವಾಜ ಬೊಮ್ಮಾಯಿ, ಸಚಿವ ಆನಂದ್ ಸಿಂಗ್ ಕರೆಸಿ ಮಾತನಾಡಿದ್ಧೇನೆ. ಆನಂದ್ ಸಿಂಗ್ ತಮ್ಮ ಭಾವನೆ , ಮನವಿ  ಹೇಳಿಕೊಂಡಿದ್ದಾರೆ. ಅವರ ಮನವಿ ಭಾವನೆಯನ್ನ ಗೌರವಿಸುತ್ತೇನೆ. ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಹೇಳಿ ಕಳಿಸಿದ್ದೇನೆ. ಆನಂದ್ ಸಿಂಗ್ ಗೌರವಕ್ಕೆ ಧಕ್ಕೆ ಬರದಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಇನ್ನು ಸಚಿವ ಎಂಟಿಬಿ ನಾಗರಾಜ್ ಸಹ ಭೇಟಿಯಾಗಿ ಮಾತನಾಡಲಿದ್ದಾರೆ ಎಂದರು.

ಸಚಿವ ಆನಂದ್‌ ಸಿಂಗ್‌ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ ತೆರಳಿದರು.

Key words: Minister-displeasure –department- CM Basavaraja Bommai