Tuesday, September 15, 2026

BDA Apartments

ಒಲಂಪಿಕ್ ಪದಕ ಜಸ್ಟ್ ಮಿಸ್! ಗಾಲ್ಫರ್ ಅದಿತಿ ಅಶೋಕ್ ಬೇಸರ BDA JK_Adv BDA Adv
Home Front Page ಒಲಂಪಿಕ್ ಪದಕ ಜಸ್ಟ್ ಮಿಸ್! ಗಾಲ್ಫರ್ ಅದಿತಿ ಅಶೋಕ್ ಬೇಸರ

ಒಲಂಪಿಕ್ ಪದಕ ಜಸ್ಟ್ ಮಿಸ್! ಗಾಲ್ಫರ್ ಅದಿತಿ ಅಶೋಕ್ ಬೇಸರ

ಬೆಂಗಳೂರು, ಆಗಸ್ಟ್ 07, 2021 (www.justkannada.in): ನಾಲ್ಕನೇ ಸ್ಥಾನ ಗಳಿಸಿರುವುದು ಸಂತಸ ತಂದಿಲ್ಲ ಎಂದು ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಮಹಿಳೆಯರ ಗಾಲ್ಫ್ ವಿಭಾಗದಲ್ಲಿ ಅದಿತಿ ಅಶೋಕ್ ಅವರಿಗೆ ಕೂದಲೆಳೆಯ ಅಂತರದಲ್ಲಿ ಪದಕ ಕೈತಪ್ಪಿತ್ತು. ಅವರ ಭಾವನೆಗಳಲ್ಲೂ ಇದು ವ್ಯಕ್ತವಾಗಿತ್ತು.

ಐತಿಹಾಸಿಕ ಸಾಧನೆ ಮಾಡಿರುವ ಆದಿತಿ, ಒಲಿಂಪಿಕ್ಸ್ ಗಾಲ್ಫ್‌ ಇತಿಹಾಸದಲ್ಲೇ ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಗಾಲ್ಫರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಬೇರೆ ಯಾವುದೇ ಟೂರ್ನಿಯಾದರೂ ನಾನು ಖುಷಿಪಡುತ್ತಿದ್ದೆ. ಆದರೆ ಒಲಿಂಪಿಕ್ಸ್‌ನಂತಹ ದೊಡ್ಡ ವೇದಿಕೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಸಂತಸಪಡುವುದು ಕಷ್ಟ ಎಂದಿದ್ದಾರೆ.