Tuesday, September 15, 2026

BDA Apartments

ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ: ಸಿಎಂ ಭೇಟಿ ಮಾಡ್ತೀ...
Home Front Page ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ: ಸಿಎಂ ಭೇಟಿ ಮಾಡ್ತೀನಿ ಎಂದ ಆನಂದ್ ಸಿಂಗ್

ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ: ಸಿಎಂ ಭೇಟಿ ಮಾಡ್ತೀನಿ ಎಂದ ಆನಂದ್ ಸಿಂಗ್

ಬೆಂಗಳೂರು, ಆಗಸ್ಟ್ 07, 2021 (www.justkannada.in): ಖಾತೆ ಹಂಚಿಕೆ ಕುರಿತಂತೆ ಬಿಜೆಪಿ ಸರ್ಕಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.

ನಾನು ನಿರೀಕ್ಷೆ ಮಾಡಿದ್ದಂತ ಖಾತೆ ಕೊಟ್ಟಿಲ್ಲವೆಂಬುದಾಗಿ ಸಚಿವ ಆನಂದ್ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದಂತ ಆನಂದ್ ಸಿಂಗ್ ಅವರು, ನಾನು ನಿರೀಕ್ಷಿಸಿದ್ದೇ ಬೇರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಖಾತೆಯೇ ಬೇರೆ ಎಂದಿದ್ದಾರೆ.

ಖಾತೆ ಹಂಚಿಕೆ ಮಾಡಿರೋದು ಪರಿಸರ, ಪ್ರವಾಸೋದ್ಯಮ ಖಾತೆಯಾಗಿದೆ. ಈ ಸ್ಥಾನ ನಿರೀಕ್ಷಿಸಿರಲಿಲ್ಲ. ನಾನು ನಿರೀಕ್ಷಿಸಿದ್ದೇ ಬೇರೆ ಎಂಬುದಾಗಿ ಅಸಮಾಧಾನ ಹೊರಹಾಕಿದ್ದಾರೆ. ನಾಳೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗುತ್ತೇನೆ. ಆ ಬಗ್ಗೆ ಚರ್ಚಿಸೋದಾಗಿ ತಿಳಿಸಿದ್ದಾರೆ.