Wednesday, July 29, 2026

BDA Apartments

Home Cinema ಅಭಿಮಾನಿಗಳು ಮೆಚ್ಚಿದ ದುನಿಯಾ ವಿಜಯ್ ‘ಸಲಗ’ ಮೋಷನಲ್ ಸಾಂಗ್

ಅಭಿಮಾನಿಗಳು ಮೆಚ್ಚಿದ ದುನಿಯಾ ವಿಜಯ್ ‘ಸಲಗ’ ಮೋಷನಲ್ ಸಾಂಗ್

ಬೆಂಗಳೂರು, ಆಗಸ್ಟ್ 06, 2021 (www.justkannada.in): ದುನಿಯಾ ವಿಜಯ್ ಸಲಗ ಚಿತ್ರದ ಮೋಷನಲ್ ಸಾಂಗ್ ರಿಲೀಸ್ ಮಾಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ.

ವಿಜಯ್ ಮೊದಲ ಬಾರಿಗೆ ಆ್ಯಕ್ಸನ್ ಕಟ್ ಹೇಳಿರುವ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿದೆ. ಆದರೆ ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿತ್ತು.

ಇದೀಗ ಸಲಗ ಚಿತ್ರವೂ ರಿಲೀಸ್ ದಿನಾಂಕ ಘೋಷಣೆ ಮಾಡಿ ಚಿತ್ರಮಂದಿರ ಬರುವ ಹಾದಿಯಲ್ಲಿದೆ. ಇದಕ್ಕೂ ಮುನ್ನ ಯೂಟ್ಯೂಬ್ ನಲ್ಲಿ ಮೋಷನಲ್ ಸಾಂಗ್ ರಿಲೀಸ್ ಮಾಡಲಾಗಿದೆ.

ಟಿಣಿಂಗ ಮಿಣಿಂಗ ಟಿಶ್ಯ್ಯ ಹಾಡು ಸಖತ್ ಸದ್ದು ಮಾಡ್ತಿದೆ. ಪಕ್ಕಾ ಲೋಕಲ್ ಸಾಹಿತ್ಯ ಹೊಂದಿರುವ ಈ ಹಾಡು ಮಾಸ್ ಪ್ರೇಕ್ಷಕರ ಹಾಟ್ ಫೆವರೀಟ್ ಎನಿಸಿಕೊಳ್ಳುತ್ತಿದೆ.