Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಬಿಎಸ್,ವೈ ಕಣ್ಣೀರಿನಲ್ಲಿ ಬಿಜೆಪಿ ತೇಲಿ ಹೋಗುತ್ತೆ- ದಿಂಗಾಲೇಶ್ವರ ಶ್ರೀ ಆಕ್ರೋಶ.

ಬಿಎಸ್,ವೈ ಕಣ್ಣೀರಿನಲ್ಲಿ ಬಿಜೆಪಿ ತೇಲಿ ಹೋಗುತ್ತೆ- ದಿಂಗಾಲೇಶ್ವರ ಶ್ರೀ ಆಕ್ರೋಶ.

ಬೆಂಗಳೂರು,ಜುಲೈ,26,2021(www.justkannada.in):  ಬಿಜೆಪಿ ವರಿಷ್ಠರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಎಸ್ ವೈಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಮುಂದಿನ ಎರಡು ವರ್ಷ ಬಿಎಸ್ ವೈ ಅವರನ್ನೇ ಸಿಎಂ ಮಾಡಿ. ಇಲ್ಲದಿದ್ದರೇ  ಬಿಜೆಪಿ ಬಿಎಸ್ ವೈ ಕಣ್ಣೀರಲ್ಲಿ ತೇಲಿ ಹೋಗುತ್ತೆ ಎಂದು ಬಾಲೇ ಹೊಸೂರು ಮಠದ ದಿಂಗಾಲೇಶ್ವರ ಶ್ರೀ  ಎಚ್ಚರಿಕೆ ನೀಡಿದ್ದಾರೆ.jk

ಸಿಎಂ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ ಕುರಿತು ಮಾತನಾಡಿದ ದಿಂಗಾಲೇಶ್ವರ ಶ್ರೀ, ಮಠಾಧೀಶರು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಬಿಎಸ್ ವೈ ಕಣ್ಣೀರನ್ನ ಸವಾಲಾಗಿ ಸ್ವೀಕರಿಸಿದ್ದೇವೆ. ಇದು ಬಿಎಸ್ ವೈ ಕಣ್ಣೀರಲ್ಲ. ಇಡಿ ಕರುನಾಡಿನ ಕಣ್ಣೀರು. ಬಿಜೆಪಿ ಕಟ್ಟಿ ಬೆಳೆಸಲಾಗದಷ್ಟು ಸ್ಥಿತಿಗೆ ಹೋಗುತ್ತೆ ಎಂದು ಕಿಡಿಕಾರಿದರು.

ಇದು ನಮ್ಮ ಸಮುದಾಯದ ಒಬ್ಬ ನಾಯಕ ಕಣ್ಣೀರು ಹಾಕಿದ್ದಲ್ಲ. ನಮ್ಮ ಸಮುದಾಯದ ಎಲ್ಲರೂ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಕಣ್ಣೀರು ಹಾಕಿಸುತ್ತೇವೆ ಎಂದು ದಿಂಗಾಲೇಶ್ವರ ಶ್ರೀ ತಿಳಿಸಿದರು.

Key words: BJP- floats – BS Yeddyurappa- tears-Dingaleshwara Sri