Sunday, August 9, 2026

BDA Apartments

Home Front Page ಸಿಎಂ ಬಿಎಸ್ ವೈ ಪರ ನಿಂತ ಮಠಾಧೀಶರ ವಿರುದ್ಧ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿ.

ಸಿಎಂ ಬಿಎಸ್ ವೈ ಪರ ನಿಂತ ಮಠಾಧೀಶರ ವಿರುದ್ಧ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿ.

ಮೈಸೂರು,ಜುಲೈ,21,2021(www.justkannada.in):  ಸಿಎಂ ಬದಲಾವಣೆ ಚರ್ಚೆಯಾಗುತ್ತಿರುವ ಹಿನ್ನೆಲೆ ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಪರ ನಿಂತ ಮಠಾಧೀಶರ ವಿರುದ್ಧ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿ ಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ,  ಮಠಾಧೀಶರು ಮಾರ್ಗದರ್ಶನದ ಕರ್ತವ್ಯವನ್ನು ಮರೆತಿದ್ದಾರೆ. ಜನವಿರೋಧಿ ಸರ್ಕಾರವೊಂದನ್ನು ರಕ್ಷಿಸಲು ಮುಂದಾಗ್ತಿದ್ದಾರೆ. ಜಾತಿ ರಾಜಕಾರಣದೊಳಗೆ ಧುಮುಕಿರುವುದು ಜಾತಿವಾದಿ ಸಮಾಜವನ್ನು ಮುಂದುವರೆಸುವ ಅಪಾಯವನ್ನು ಸೂಚಿಸುತ್ತಿದೆ. ಅಷ್ಟಕ್ಕೂ ಬೆಲೆ ಏರಿಕೆ ಮತ್ತು ಕಳಪೆ ಆಡಳಿತದಿಂದಾಗಿ ಜನ ಸಾಮಾನ್ಯರ ಬದುಕು ದುಸ್ಥಿತಿಗೆ ಬಂದಿದೆ.

ಈ ಬಗ್ಗೆ ಸರ್ಕಾರವೊಂದಕ್ಕೆ ಚಾಟಿ ಬೀಸಬೇಕಾದ ಜವಾಬ್ದಾರಿಯನ್ನ ಮರೆತಿದ್ದಾರೆ.ಜಾತಿಯ ಕಾರಣಕ್ಕೆ ಜನ ವಿರೋಧಿ ಸರ್ಕಾರದ ಪರ ನಿಲ್ಲುವುದು ನಿಜಕ್ಕೂ ತಲೆ ತಗ್ಗಿಸುವಂತಹ ಸಂಗತಿ ಎಂದು  ಬಿಎಸ್ ವೈ ಪರ ನಿಂತ ಮಠಾಧೀಶರಿಗೆ ಟಾಂಗ್ ನೀಡಿದ್ದಾರೆ.

Key words: Former minister -HC Mahadevappa- spits – CM BS yeddyurappa